ಕರ್ನಾಟಕ

ಸರ್ವರಿಗೂ ನ್ಯಾಯ ಒದಗಿಸಲು ‘ನ್ಯಾಯ ಸಂಯೋಗ’ ಸಹಾಯವಾಣಿ ಆರಂಭ

ಬೆಂಗಳೂರು, ಸೆ.5 (ರಾಜ್ಯ ಸುದ್ದಿ) : ಸರ್ವರಿಗೂ ನ್ಯಾಯ ಕೊಡುವ ನಿಟ್ಟಿನಲ್ಲಿ ‘ನ್ಯಾಯ  ಸಂಯೋಗ’ವನ್ನು ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸುಬ್ರೋಕಮಲ್ ಮುಖರ್ಜಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಪಾಟೀಲ್ ಅವರು ಉದ್ಘಾಟಿಸಿದರು.

ನಗರದ ಸಿದ್ದಯ್ಯ ರಸ್ತೆಯ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೊದಲ ಮಹಡಿಯಲ್ಲಿ ನ್ಯಾಯ ಸಂಯೋಗವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಈ  ಸಂದರ್ಭ ನ್ಯಾಯಮೂರ್ತಿಗಳು, ವಕೀಲರು ಹಾಜರಿದ್ದರು.

ಬಡ, ಕೆಳವರ್ಗದ ಜನರಿಗೆ ನ್ಯಾಯ ಒದಗಿಸುವಲ್ಲಿ ಈ ನ್ಯಾಯ ಸಂಯೋಗ ಕಾರ್ಯನಿರ್ವಹಿಸಲು ಸಜ್ಜಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5-00 ಗಂಟೆಯವರೆಗೆ ಎಲ್ಲ ಕೆಲಸದ ದಿನಗಳೂ ಕಾರ್ಯನಿರ್ವಹಿಸುತ್ತದೆ. ಇದರ ಸಹಾಯವಾಣಿ ಸಂಖ್ಯೆ 1800-425-90900 ದೂರವಾಣಿ ಸಂಖ್ಯೆ 080-22111730 ಇ-ಮೇಲ್ ವಿಳಾಸ  [email protected] 

ಇಲ್ಲಿ ವಕೀಲರು, ಜೈಲು ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಹ ನಡೆಸಲಾಗುವುದು. ಮಧ್ಯಸ್ಥಿಕೆ ಮೂಲಕವೂ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು.

ಎನ್.ಬಿ.

Leave a Reply

comments

Related Articles

error: