ಪ್ರಮುಖ ಸುದ್ದಿ

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಸೆ.೫: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯ ಶವ ದೊರಕಿದ್ದು ಈತನ ಪತ್ತೆಗೆ ನೆರವಾಗುವಂತೆ ಪಟ್ಟಣ ಪೊಲೀಸರು ಮನವಿ ಮಾಡಿದ್ದಾರೆ.
ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಬಳಿ ಪುರುಷನೊಬ್ಬನ ಶವ ಕಂಡು ಬಂದಿದೆ. ಮಾಹಿತಿ ತಿಳಿದ ಪೊಲೀಸರು ಈತನ ಚಹರೆಯನ್ನು ಕಾಣೆಯಾದವರ ಫೋಟೊಗಳೊಂದಿಗೆ ಹೋಲಿಕೆ ಮಾಡಿದರೂ ಗುರುತು ದೊರಕದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈತನ ಫೋಟೋವನ್ನು ಹಾಕಿ ಗುರುತು ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಮೃತನ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೂ ಆತನ ವಾರಸುದಾರರು ಬರದಿದ್ದರೆ ಸಂಸ್ಕಾರ ಮಾಡಲಾಗುವುದು ಎಂದು ಪಟ್ಟಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: