ಮೈಸೂರು

ಗೃಹಿಣಿ ನಾಪತ್ತೆ ಪ್ರಕರಣ : ರಾಯಚೂರಿನಲ್ಲಿ ಮಗುವಿನೊಂದಿಗೆ ಪತ್ತೆ

ಮೈಸೂರು,ಸೆ.5:- ಗೃಹಿಣಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.  ಗಂಡನ ಮನೆಯವರ ಕಿರುಕುಳ ತಾಳಲಾರದೇ ಮನೆಯಿಂದ ನಾಪತ್ತೆಯಾಗಿದ್ದ ಮೈಸೂರಿನ ಗೃಹಿಣಿ ಮಂಗಳವಾರ ಬೆಳಿಗ್ಗೆ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ.
ನಗರದ ಹೂಟಗಳ್ಳಿ ಬಡಾವಣೆ ನಿವಾಸಿ ಲಿಖಿತಾ (24) ಎಂಬುವವರೇ ಗಂಡನ ಮನೆಯವರ ಕಿರುಕುಳ ತಾಳಲಾರದೇ ನಾಪತ್ತೆಯಾಗಿದ್ದರು.  ತನ್ನ  ಮನಸ್ಸಿನ ನೋವನ್ನೆಲ್ಲಾ ವಿಡಿಯೋ ರೆಕಾರ್ಡ್ ಮಾಡಿ ನಂತರ ತನ್ನ ಮಗನ ಜೊತೆ ಮನೆಯಿಂದ ನಾಪತ್ತೆಯಾಗಿದ್ದರು.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಡನ ಮನೆಯವರ ಕಿರುಕುಳಕ್ಕೇ ಬೇಸತ್ತ ಲಿಖಿತಾ ಅವರು ರಾಯಚೂರಿನ ಆಶ್ರಮಕ್ಕೆ ಸೇರಲೆಂದು ತೆರಳಿದ್ದರು. ಲಿಖಿತಾ ವಿಡಿಯೋ ರೆಕಾರ್ಡ್  ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗಿದ್ದು, ಸುದ್ದಿಯನ್ನು ನೋಡಿದ ಆಶ್ರಮ ನಿವಾಸಿಗಳು ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಿಜಯನಗರಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ಕರೆತರಲು ತೆರಳಿದ್ದಾರೆ. ಇದರಿಂದ ಪ್ರಕರಣ ಸುಖಾಂತ್ಯಗೊಂಡಿದೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: