ಕರ್ನಾಟಕಪ್ರಮುಖ ಸುದ್ದಿ

ಸಾಲಬಾಧೆ : ಮಾಜಿ ಗ್ರಾ.ಪಂ ಸದಸ್ಯ ನೇಣಿಗೆ ಶರಣು

ರಾಜ್ಯ(ಮಂಡ್ಯ)ಸೆ.5:- ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದೆ. ಸಾಲಬಾಧೆಗೆ ನೇಣು ಬಿಗಿದುಕೊಂಡು ಮಾಜಿ ಗ್ರಾ.ಪಂ. ಸದಸ್ಯ, ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಶಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಾರಹಳ್ಳಿ ಗ್ರಾಮದ ಬಾಲಕೃಷ್ಣ (45) ಎಂದು ಗುರುತಿಸಲಾಗಿದೆ. ಮನೆಯ ದನದ ಕೊಟ್ಟಿಗೆಯಲ್ಲಿ ಮಂಗಳವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿದ್ದ ರೈತ ಕಬ್ಬು ಬೆಳೆಯುತ್ತಿದ್ದರು. ಮಳೆಯಿಲ್ಲದೆ ಕಬ್ಬು ಸಂಪೂರ್ಣ ಒಣಗಿ ಹೋಗಿದ್ದರಿಂದ  ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದರು. ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: