ಮೈಸೂರು

ಮುಂದಿನ 5 ದಿನ ಮೈಸೂರಿನಲ್ಲಿ ಮಳೆ ಇಲ್ಲ

ಅಕ್ಟೋಬರ್ 26 ರಿಂದ 30ರ ವರೆಗೆ ಮೈಸೂರು ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆಗಳಿಲ್ಲ. ದಿನದ ವಾತಾವರಣ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ 18 ರಿಂದ 19 ಡಿಗ್ರಿ ಸೆಲ್ಸಿಯಸ್ ವಾತಾವರಣ ಇರಲಿದೆ. ಬೆಳಗಿನ ತೇವಾಂಶ ಶೇ. 87 ರಿಂದ 95, ಮಧ್ಯಾಹ್ನದ ಬಳಿಕ ಶೇ. 36 ರಿಂದ 50, ಗಾಳಿಯ ವೇಗ ಪ್ರತಿ ಗಂಟೆಗೆ 3 ರಿಂದ 4 ಕಿಮೀ ನಿರೀಕ್ಷಿಸಬಹುದು ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ಒಣಹವೆ ಮುಂದುವರಿಯುವ ಸಾಧ್ಯತೆಯಿರುವುದರಿಂದ ರೈತರು ಮಣ್ಣು ಮತ್ತು ಬೆಳೆ ಸ್ಥಿತಿಯನ್ನು ಗಮನಿಸಿ ತೋಟಗಾರಿಕಾ ಬೆಳೆಗಳಿಗೆ ನೀರು ಹರಿಸಬೇಕು. ಬತ್ತದ ಫಸಲಿಗೆ ರೋಗ ಬಾರದಂತೆ ತಡೆಗಟ್ಟಲು ಕ್ಲೋರೋಫಿರಿಫಸ್‍ಗೆ 2 ಎಮ್‍ಎಲ್‍ ನೀರು ಬೆರೆಸಿ ಸಿಂಪಡಿಸಬಹುದು.

ಪಾರಾಮೀಟರ್26.10.201627.10.201628.10.201629.10.201630.10.2016
ಮಳೆ(ಮಿಮೀ)00000
ಗರಿಷ್ಠ ಉಷ್ಣಾಂಶ3131313131
ಕನಿಷ್ಠ ಉಷ್ಣಾಂಶ1919191818
ಮೋಡ ಪ್ರಮಾಣ (ಓಕ್ಟಾಸ್)31211
ತೇವಾಂಶ(%) 08.30ಗಂಟೆಗಳಲ್ಲಿ9594919387
ತೇವಾಂಶ(%) 17.30ಗಂಟೆಗಳಲ್ಲಿ5045474136
ಗಾಳಿಯ ವೇಗ (ಕಿ.ಮೀ/ಗಂಟೆ)34334
ಗಾಳಿಯ ದಿಕ್ಕು12010010012050

 

Leave a Reply

comments

Related Articles

error: