ಕರ್ನಾಟಕಪ್ರಮುಖ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾವುದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದಾರೆ : ಸಂಸದ ಪ್ರಹ್ಲಾದ್ ಜೋಶಿ ಆರೋಪ

ರಾಜ್ಯ(ಹುಬ್ಬಳ್ಳಿ)ಸೆ.5:- ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಸಂಸದ ಪ್ರಹ್ಲಾದ್  ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ದಾವುದ್ ಇಬ್ರಾಹಿಂ ಚಿಕ್ಕಪ್ಪನಂತೆ  ವರ್ತಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಕಗ್ಗೊಲೆಗಳಾಗುತ್ತಿವೆ, ಕೊಲೆಗಡುಕರನ್ನು ರಕ್ಷಿಸುತ್ತಿದ್ದಾರೆ, ಇದನ್ನು ವಿರೋಧಿಸಲು ಹೊರಟವರನ್ನು ಪೊಲೀಸರನ್ನು ಬಳಸಿ ಹತ್ತಿಕ್ಕುತ್ತಿದ್ದಾರೆ,ಇದು ಸರಿಯಲ್ಲ. ಹುಬ್ಬಳ್ಳಿಗೆ ವಿವಿಧೆಡೆಗಳಿಂದ ಬೈಕ್ ಗಳಲ್ಲಿ ಬರುತ್ತಿದ್ದವರನ್ನು ಬಂಧನ ಮಾಡಲಾಗುತ್ತಿದೆ, ಬೈಕ್ ಓಡಿಸುವುದು ಅಪರಾಧ ಎನ್ನುವಂತೆ ವಾತಾವರಣ ನಿರ್ಮಾಣ, ಬೈಕಲ್ಲಿ ಬರುತ್ತಿದ್ದ ನಮ್ಮವರ ಬಂಧನ ಮಾಡಲಾಗಿದೆ. ಅವರನ್ನು ಬಿಡುವವರೆಗೂ ನಮ್ಮ ರ್ಯಾಲಿ ಇಲ್ಲ. ಇಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು. ಶಾಂತಿಯುತ ಪ್ರತಭಟನೆ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಕೇರಳದ ಕಮ್ಮುನಿಸ್ಟ್  ನಾಯಕರಿಗೆ ಮಂಗಳೂರಲ್ಲಿ ರ್ಯಾಲಿ ಗೆ ಅವಕಾಶ ಮಾಡಿದವರು, ಬಿಜೆಪಿ ಯವರಿಗೆ ತಡೆಯೊಡ್ಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಪೊಲೀಸರು ಜವಾಬ್ದಾರಿಯುತವಾಗಿ ನಡೆದಕೊಳ್ಳಬೇಕು ಎಂದರಲ್ಲದೇ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವ ಧಾರವಾಡ ಎಸಿಪಿ ವಾಸು ಮೇಲೆ ಕ್ರಮಕ್ಕೆ ಆಗ್ರಹಿಸಿದರು. ಶಾಂತಿಯುತ ಪ್ರತಿಭಟನೆ ತಡೆಯುವ ಹಕ್ಕು ಸಿದ್ದರಾಮಯ್ಯನವರಿಗೆ ಇಲ್ಲ, ಮುಸ್ಲೀಂ ತುಷ್ಟೀಕರಣಕ್ಕಾಗಿ ಮತ ಬ್ಯಾಂಕ್ ಗಾಗಿ ರ್ಯಾಲಿ ತಡೆಯುವ ಯತ್ನ ನಡೆಯುತ್ತಿದೆ ಇದು ಸರಿಯಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: