ಕರ್ನಾಟಕಮೈಸೂರು

ಎಂ.ಬಿ. ಸಿಂಗ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ, ಪತ್ರಿಕಾವಲಯದಲ್ಲಿ ಎಂ.ಬಿ. ಸಿಂಗ್ ಎಂದೇ ಪರಿಚಿತರಾಗಿದ್ದ ಮದನ್ ಭುವನ್ ಸಿಂಗ್ ಬುಧವಾರ  ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

1952ರ ಮೇ 24ರಂದು ಮೈಸೂರಿನಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮಂಡ್ಯದಲ್ಲಿ ಪೂರೈಸಿ, ಮೈಸೂರಿನಲ್ಲಿ ಕಾಲೇಜು ಶಿಕ್ಷಣವನ್ನು ಮುಗಿಸಿದ್ದರು. ತನ್ನ ಕಾಲೇಜು ದಿನಗಳಲ್ಲಿಯೇ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾತೃಭೂಮಿ ಪತ್ರಿಕೆಯ ವರದಿಗಾರ ಹಾಗೂ ಏಜಂಟರಾಗಿ ಕಾರ್ಯನಿರ್ವಹಿಸಿದ್ದರು. ವೀರಕೇಸರಿ ಅವರ ವಾರ್ತಾ, ಚಿತ್ರಗುಪ್ತ, ವಿಶ್ವಕರ್ನಾಟಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಅವರದ್ದು. ಪ್ರಜಾವಾಣಿಯೊಂದಿಗೆ ಸುಧಾ ಸಾಪ್ತಾಹಿಕ, ಮಾಸಿಕ ಮಯೂರದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಮಾಲಿಕರಲ್ಲದ ಉದ್ಯೋಗಿಯೊಬ್ಬರು ಮೂರು-ಮೂರು ಪತ್ರಿಕೆಗಳಲ್ಲಿ ಸಂಪಾದಕರಾಗುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡರು.

ಅವರ ಕಾರ್ಯ ಕ್ಷಮತೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿಗಳು ಇವರನ್ನರಸಿ ಬಂದಿತು. ಪತ್ರಿಕೋದ್ಯಮದಲ್ಲಿನ ಜೀವಮಾನ ಸಾಧನೆಗಾಗಿ 2007 ರ ಝೀ-ಟಿವಿ-ಕನ್ನಡ ಪ್ರಶಸ್ತಿ ಲಭಿಸಿದ್ದು, ಇದೇ ವರ್ಷ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೂ ಭಾಜನರಾಗಿದ್ದರು.

ಸಿಂಗ್ ಅವರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಅವರ ಇಚ್ಛೆಯಂತೆ ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ನೀಡಲಾಗಿದೆ.

Leave a Reply

comments

Related Articles

error: