ಸುದ್ದಿ ಸಂಕ್ಷಿಪ್ತ

ಸಿಂಗಪುರ ಕನ್ನಡ ಸಮ್ಮೇಳನಕ್ಕೆ ಎಂ.ವಿ. ನಾಗೇಂದ್ರಬಾಬು

ಸಿಂಗಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಮೈಸೂರಿನ ಖ್ಯಾತ ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರಬಾಬು ಅವರು ಭಾಗವಹಿಸಲಿದ್ದಾರೆ. ಈ ಕುರಿತು ಸಮ್ಮೇಳನದ ಸಂಘಟಕರಿಂದ ಅವರಿಗೆ ಆಹ್ವಾನ ಬಂದಿದ್ದು, ಅ.29ರಂದು ಬೆಳಗ್ಗೆ 11.30ಕ್ಕೆ ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್‍ನಲ್ಲಿ ಸಿಂಗಾರ ಕನ್ನಡ ಸಂಘದ ಅಧ್ಯಕ್ಷರಾದ ಎನ್.ಎಸ್. ವಿಜಯರಂಗ ಪ್ರಸಾದ್ ಅವರು ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನ ಕಾರ್ಯದರ್ಶಿ ಕೆ.ಜೆ. ಶ್ರೀನಿವಾಸ್, ಹಿರಿಯ ಸಾಹಿತಿ ಹಾಗೂ ಪದ್ಮಶ್ರೀ ಪುಸ್ಕೃತ ಎಲ್.ಎಲ್. ಭೈರಪ್ಪ, ಉಪನ್ಯಾಸಕ ಹಾಗೂ ಹಾಸ್ಯ ಕಲಾವಿದರಾದ ಪ್ರೊ. ಕೃಷ್ಣೇಗೌಡ, ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಮಯ ನಾಗೇಂದ್ರಬಾಬು ಅವರು ಮಕ್ಕಳಿಗಾಗಿ ವ್ಯಂಗ್ಯಚಿತ್ರ ಶಿಬಿರ ನಡೆಸಿಕೊಡಲಿದ್ದಾರೆ.

ನಾಗೇಂದ್ರ ಬಾಬು ಅವರಿಗೆ ಇದು 3ನೇ ವ್ಯಂಗ್ಯಚಿತ್ರ ಪ್ರದರ್ಶನವಾಗಿದೆ. ಈ ಮೊದಲು ಅವರು ಅಮೆರಿಕ, ತೈವಾನ್ ದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ಹೆಚ್ಚಿನ ಮಾಹಿತಿಗಾಗಿ: 98451 41050 ಸಂಖ್ಯೆಗೆ ಸಂಪರ್ಕಿಸಬಹುದು.

Leave a Reply

comments

Related Articles

error: