ಕ್ರೀಡೆದೇಶ

ಹುತಾತ್ಮ ಎಎಸ್ಐ ಮಗಳ ಶಿಕ್ಷಣಕ್ಕೆ ನೆರವು ನೀಡಲಿದ್ದಾರೆ ಗೌತಮ್ ಗಂಭೀರ್

ನವದೆಹಲಿ,ಸೆ.5-ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಎಎಸ್ಐ ಓರ್ವರ ಮಗಳ ಶಿಕ್ಷಣಕ್ಕೆ ನೆರವು ನೀಡಲು ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಸೈನಿಕರ ನೋವು ನನ್ನ ನೋವು ಎಂದು ಅವರಿಗಾಗಿ ಸದಾ ನೆರವಾಗುವ ಗಂಭೀರ್ ಅವರು ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಎಎಸ್‌ಐ ಅಬ್ದುಲ್ ರಶೀದ್ ಅವರ ಪುತ್ರಿ ಝೋಹ್ರಾಳ ಸಂಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಟ್ವಿಟ್ ಮಾಡಿದ್ದಾರೆ.

‘ಝೋಹ್ರಾ ನೀನು ಲಾಲಿ ಹಾಡಿಗೆ ಮಲಗಿಕೊಂಡಿರುವುದು ಬೇಡ. ನೀನು ಎಚ್ಚೆತ್ತುಕೊ, ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಾನು ನೆರವಾಗುತ್ತೇನೆ. ನಿನ್ನ ಜೀವಮಾನದ ಪೂರ್ತಿ ನಿನ್ನ ಶಿಕ್ಷಣಕ್ಕೆ ನಾನು ನೆರವು ನೀಡುತ್ತೇನೆ. ನಿನ್ನ ಕಣ್ಣೀರು ಬೀಳಲು ಬಿಡಬೇಡ. ನನಗನ್ನಿಸುತ್ತದೆ ಆ ಭೂಮಿ ತಾಯಿ ನಿನ್ನ ನೋವನ್ನು ನುಂಗಬಹುದು. ನಿನ್ನ ಹುತಾತ್ಮ ತಂದೆಗೆ ನನ್ನ ನಮನಗಳು’ ಎಂದು ಟ್ವಿಟ್ ಮಾಡಿದ್ದಾರೆ. ಗೌತಮ್ ಗಂಭೀರ್ ಫೌಂಡೇಷನ್ ಸ್ಥಾಪಿಸಿಕೊಂಡು ಅನೇಕರಿಗೆ ನೆರವು ನೀಡುತ್ತಿರುವ ಗಂಭೀರ್ ಈ ಹಿಂದೆ ಛತ್ತೀಸ್ಘಡದ ಸುಕ್ಮಾದಲ್ಲಿ ಹುತಾತ್ಮರಾದ 25 ಸಿಆರ್ಪಿಎಫ್ ಯೋಧರ ಮಕ್ಕಳ ಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: