ಮೈಸೂರು

ಅರಮನೆ ಆವರಣದಲ್ಲಿ ನ್ಯಾಯಾಧೀಶೆ ಮೇಲೆ ಹಲ್ಲೆ: ಎಫ್‍ಐಆರ್ ದಾಖಲಾಗಿದ್ದರೂ ಕ್ರಮ ಕೈಗೊಂಡಿಲ್ಲ

ಮೈಸೂರು ಅರಮನೆ ವೀಕ್ಷಿಸಲು ಬಂದ ಮಹಿಳಾ ನ್ಯಾಯಾಧೀಶರೊಬ್ಬರಿಗೆ ಪ್ರವೇಶ ನಿರ್ಬಂಧಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಎಫ್‍ಐಆರ್ ದಾಖಲಾಗಿ 10 ದಿನವಾಗಿದ್ದರೂ, ಇಲ್ಲಿವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಬಾಗಲಕೋಟೆ ನ್ಯಾಯಾಲಯದ ನ್ಯಾಯಾಧೀಶರಾದ ಶಾರದ ಮತ್ತು ಕುಟುಂಬ ವರ್ಗ ಅ. 14 ರಂದು ಸಂಜೆ 5.45 ರ ಸುಮಾರಿನಲ್ಲಿ ಅರಮನೆ ವೀಕ್ಷಿಸಲು ಬಂದಿದ್ದಾಗ ಜಯಮಾರ್ತಾಂಡ ದ್ವಾರದ ಬಳಿ ಈ ಘಟನೆ ನಡೆದಿತ್ತು.

ಅರಮನೆ ಪ್ರವೇಶಕ್ಕೆ ಸಾರ್ವಜನಿಕರ ಪ್ರವೇಶ ಸಮಯ ಮುಗಿದಿದ್ದರಿಂದ ಹಾಗೂ ಜಯಮಾರ್ತಾಂಡ ದ್ವಾರದ ಮೂಲಕ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಕರ್ತವ್ಯನಿರತ ಪೇದೆ, ಶಾರದ ಮತ್ತು ಕುಟುಂಬ ವರ್ಗದವರ ಅರಮನೆ ಪ್ರವೇಶಕ್ಕೆ ತಡೆಯೊಡ್ಡಿದರು ಎನ್ನಲಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು, ಪೊಲೀಸ್ ಪೇದೆಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದರು ಎಂದು ನ್ಯಾಯಾಧೀಶರಾದ ಶಾರದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು.

 

Leave a Reply

comments

Related Articles

error: