ಕರ್ನಾಟಕ

ಮುಸ್ಲಿಂ ಮಹಿಳೆ ಕಾಳಿ ಗುಡಿ ಕಟ್ಟಲು ಏಕಾಂಗಿ ಪ್ರತಿಭಟನೆ

ಕುಶಾಲನಗರ, ಸೆ.5 :  ಪಟ್ಟಣದಲ್ಲಿ ಹಲವಾರು ರೀತಿಯ ಪ್ರತಿಭಟನೆಗಳು ನಡೆದಿದ್ದು ಇಂದು ವಿಭಿನ್ನ ಪ್ರತಿಭಟನೆಗೆ ಕುಶಾಲನಗರ ಸಾಕ್ಷಿಯಾಗಿದೆ. ಪಟ್ಟಣದ ಬ್ರೀಲಿಯಂಟ್ ಬ್ಲೂಮ್ ಶಾಲೆಯ ಸಂಸ್ಥಾಪಕಿ ಮುಬೀನ್ ತಾಜ್ ಅವರೇ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದವರು. ತಮ್ಮ ಶಾಲೆಯ ಕೊಠಡಿಯೊಂದರ ಭೂಮಿಯೊಳಗೆ ಪುರಾತನ ಕಾಲದ ಮಹಾಕಾಳಿಯ ವಿಗ್ರಹವಿದೆ ಅದನ್ನು ಹೊರ ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ತ್ರಿಶೂಲ ಧಾರಿಯಾಗಿ ಶಾಲೆಯ ಮುಂಭಾಗದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಪಟ್ಟಣ ಪಂಚಾಯಿತಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಸುಮಾರು 600ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮಹಾಕಾಳಿಯ ದೇವಾಲಯವಿದ್ದು ಟಿಪ್ಪು ಸುಲ್ತಾನ್‍ನ ಆಳ್ವಿಕೆಯ ಕಾಲದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸುತ್ತಿದ್ದು ಅಂದಿನ ಪೂಜೆ ಸಲ್ಲಿಸುತ್ತಿದ್ದ ಪುರೋಹಿತ ಭಕ್ತರೊಬ್ಬರು ಮಹಾಕಾಳಿಯ ವಿಗ್ರಹವನ್ನು ಭೂಮಿಯೊಳಗೆ ಅಡಗಿಸಿದ್ದಾರೆ. ಅದನ್ನು ಹೊರ ತೆಗೆಯುವಂತೆ ದೇವಿ ನನ್ನ ಕನಸಲ್ಲಿ ಹೇಳಿದ್ದು ಅದನ್ನು ಹೊರತೆಗೆದು ವಿಗ್ರಹವನ್ನು ಪ್ರತಿಸ್ಠಾಪಿಸಿ ದೇವಾಸ್ಥಾನವನ್ನು ನಿರ್ಮಾಣ ಮಾಡುವಂತೆ ಹೇಳಿದೆ. ಅದರಂತೆ ಭೂಮಿಯೊಳಗಿರುವ ವಿಗ್ರಹವನ್ನು ತೆಗೆಯಲು ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಬಿಸಿಲು ಎನ್ನದೆ ಪಂಚಾಯಿತಿ ಮುಂಭಾಗ ತ್ರಿಶೂಲವನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾಗ ಪಂಚಾಯಿತಿ ಸಿಬ್ಬಂದಿಗಳು ದೇವಿ ದೇಹದಲ್ಲಿ ಇರುವಲು ಎಂದು ತಿಳಿದು ತಟ್ಟೆಯಲ್ಲಿ ಹರಿಶಿನ ಹಾಗೂ ಕುಂಕುಮವನ್ನು ತಂದು ಶಾಂತಿಯಾಗುವಂತೆ ಬೇಡಿದಾಗ ತಟ್ಟೆಗೆ ಒಡೆದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಪ್ರತಿಭಟನೆಯ ವಿಷಯ ತಿಳಿದು ನೂರಾರು ಮಂದಿ ಪಂಚಾಯಿತಿ ಮುಂಭಾಗ ಜಮಾಯಿಸಿ ತೊಡಗಿದರು. ಇದರಿಂದ ಕಂಗಲಾದ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಪೋಲಿಸ್ ಠಾಣೆಗೆ ದೂರು ನೀಡಿದ್ದು ಕೊಡಲೇ ಮಹಿಳಾ ಸಿಬ್ಬಂದಿಗಳು ಹಾಗೂ ಉಪ ತಹಶೀಲ್ದಾರ್ ನಂದಕುಮಾರ್ ಮೊಬೀನ್ ತಾಜ್ ಅವರನ್ನು ಮನವೋಲಿಸಲು ಮುಂದಾದರು ಆದರು ಪ್ರತಿಭಟನೆ ಮಾಡುವುದಾಗಿ ತಿಳಿಸಿದಾಗ ಪೋಲಿಸರು ಅವರನ್ನು ಎತ್ತಿಕೊಂಡು ಪೋಲಿಸ್ ಠಾಣೆಗೆ ಕರೆದೊಯ್ದರು.

ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ಶ್ರೀಧರ್ 2001ನೇ ಇಸವಿಯಲ್ಲಿ ಇಲ್ಲಿ ವಿಗ್ರಹವಿದೆ ಎಂದು ನಮಗೆ ಮನವಿ ಪತ್ರ ನೀಡಿದ್ದು ಆ ವಾರ್ಡಿನ ಸದಸ್ಯರು ಹಾಗೂ ಜಾಗದ ಮಾಲೀಕರಾದ ಶೇಷಾದ್ರಿ ಅವರನ್ನು ಕರೆಸಿ ಮಾತನಾಡಿದ್ದು ಅದಕ್ಕೆ ಜಾಗದ ಮಾಲೀಕರು ಒಪ್ಪಲಿಲ್ಲ. ಇದು ಪೂರಾತತ್ವ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ತಹಶೀಲ್ದಾರ್ ಅವರಿಗೆ ವಿಷಯ ತಿಳಿಸಿದ್ದೇವೆ. ಪ್ರತಿಭಟನೆ ನಡೆಸುತ್ತಿರುವ ವಿಷಯವನ್ನು ಮೇಲಾಧಿಕಾರಿಗೆ ತಿಳಿಸುತ್ತೇವೆ ಅವರು ಕ್ರಮಕೈಗೊಳ್ಳುತ್ತಾರೆ ಎಂದರು.

ಬಳಿಕ ಮಾತನಾಡಿದ ಮುಬೀನ್ ತಾಜ್ ಶಾಲೆಯ ಕೊಠಡಿ ಇರುವ ನೆಲದಲ್ಲಿ ಪುರಾತನ ಕಾಲದ ಮಹಾ ಕಾಳಿ ದೇವಿಯ ವಿಗ್ರಹವು ಇದ್ದು ಮಹಾಕಾಳಿ ನನ್ನ ಕನಸಿನಲ್ಲಿ ಬಂದು ವಿಗ್ರಹ ತೆಗೆಯುವಂತೆ ಮತ್ತು ಅದನ್ನು ಪ್ರತಿಷ್ಠಾಪಿಸುವಂತೆ ಹೇಳಿದ್ದು ಅದನ್ನು ಹೊರ ತೆಗೆಯಲು ಅನುಮತಿ ನೀಡಬೇಕು. ಅನುಮತಿ ನೀಡುವವರೆಗು ಇಲ್ಲಿಂದ ಹೋಗುವುದಿಲ್ಲ ಎಂದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: