ಕರ್ನಾಟಕ

ಕಲ್ಯಾಣಿ ಸ್ವಚ್ಛತಾ ಕಾಮಗಾರಿಯನ್ನು ಪರಿಶಿಲಿಸಿದ ಸಿಇಒ

ರಾಜ್ಯ(ಹಾಸನ)ಸೆ.5:-ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಪಟ್ಟಣದ ಕಲ್ಯಾಣಿ ಸ್ವಚ್ಛತಾ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಜಾನಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಈಗಾಗಲೇ ಶೇಖಡಾ 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಇನ್ನು ಹತ್ತು ದಿನಗಳಲ್ಲಿ ಮುಗಿಯಲಿದೆ. ಪುರಾತತ್ವ ಇಲಾಖೆಯಿಂದ ಆಗಬೇಕಾದ ಕಲ್ಯಾಣಿ ಸುತ್ತಲ ಗೋಪುರ ಕಾಮಗಾರಿಯು ಶೀಘ್ರ ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಸಿಡಿಪಿಒ ಚಂದ್ರಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ ಪ್ರಭಾಕರ್, ಪಿಡಿಒ ನವೀನ್ ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: