ಪ್ರಮುಖ ಸುದ್ದಿಮೈಸೂರು

ಹಾವು ಮುಂಗುಸಿಯಂತಿದ್ದ ಹಾಲಿ ಮತ್ತು ಮಾಜಿ ಸಂಸದರು ಮುಖಾಮುಖಿ

ಮೈಸೂರು,ಸೆ.5:- ಪರಸ್ಪರ ಹಾವು ಮುಂಗುಸಿಯಂತಿದ್ದ ಹಾಲಿ ಮತ್ತು ಮಾಜಿ ಸಂಸದರು ಏಕಾಏಕಿ ಮುಖಾಮುಖಿಯಾಗಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಪರಸ್ಪರ ಎದುರಾಳಿಗಳಾಗಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ  ಮುಖಾಮುಖಿಯಾಗಿದ್ದು,ಕಡೆಗೂ ಪರಸ್ಪರ ವೈಮನಸ್ಸು ಮರೆತು ಉಭಯಕುಶಲೋಪರಿ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚಿಂತನ ಮಂಥನ ನಡೆಸಿದರು. ಕಳೆದ ಲೋಕಸಭೆ ಚುನಾವಣೆಯಿಂದಲೂ ಎಣ್ಣೆ ಸೀಗೆಕಾಯಿಯಂತಿದ್ದ, ಪರಸ್ಪರ ಬೈದಾಡಿಕೊಂಡು ಬಂದಿದ್ದ ನಾಯಕರು ಪರಸ್ಪರ ಕೈ ಕುಲುಕಿದ್ದು ತೀವ್ರ ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಪರಸ್ಪರ ಮುಖಾಮುಖಿಯಾಗಿ ಮಾಜಿ ಸಂಸದ ಎಚ್. ವಿಶ್ವನಾಥ್ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ಮಾತುಕತೆ ನಡೆಸಿರುವುದು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: