ಮೈಸೂರು

ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ಬಿ.ನಾಗರಾಜು

 ಜಾಗತಿಕ ಮಟ್ಟದಲ್ಲಿ ಎಂಕಾಂ ಪದವೀಧರರಿಗೆ ಹೆಚ್ಚಿನ ಬೇಡಿಕೆ ಹಾಗೂ ಅತ್ಯುತ್ತಮ ಅವಕಾಶಗಳು ಲಭಿಸುತ್ತಿದ್ದು ವಿದ್ಯಾರ್ಥಿಗಳು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ.ಬಿ. ನಾಗರಾಜು ಆಶಿಸಿದರು.

ಅವರು, ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನ ಸಭಾಂಗಣದಲ್ಲಿಂದು ಪ್ರಥಮ ವರ್ಷದ ಎಂಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಂಕಾಂ ಅರ್ಥವನ್ನು ಸವಿಸ್ತಾರವಾಗಿ ವಿವರಿಸಿ, ಹಣವಿಲ್ಲದಿದ್ದರೆ ಮೂಲಭೂತ ಸೌಕರ್ಯಗಳು ಇಲ್ಲ. ಗಡ್ಡೆಗೆಣಸು ತಿಂದು ಜೀವಿಸುತ್ತಿದ್ದ ಪೂರ್ವಿಕರಿಗಿಂತ ನಾವು ಹೆಚ್ಚು ನಾಗರೀಕತೆಯನ್ನು ಹೊಂದಿದ್ದು ಅವರಂತೆ ಜೀವಿಸಲು ಸಾಧ್ಯವಿಲ್ಲ, ಪ್ರಸ್ತುತ ದಿನಗಳಲ್ಲಿ ಹಣಕಾಸು ನಿರ್ವಹಣೆಯು ಜೀವನದ ಆಧಾರ ಹಾಗೂ ವಾಣಿಜ್ಯ ವಿಭಾಗದ ಜೀವಾಳವೂ ಆಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ನಿರ್ವಹಣೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಉನ್ನತ ಸ್ಥಾನಕ್ಕೇರಿ, ಪೋಷಕರ ನಿರೀಕ್ಷೆಯಂತೆ ಗುರಿ ಸಾಧಿಸಿ ಅವರ ಮನೋಭಿಲಾಷೆಯನ್ನು ಈಡೇರಿಸಿ ಎಂದು ಕರೆ ನೀಡಿದರು.

ಕಾಲೇಜು ಆಡಳಿತ ಮಂಡಳಿಯ ಹೆಚ್.ಎನ್.ನಾಗರಾಜು ಮಾತನಾಡಿ, ಸುಸಜ್ಜಿತ ಗ್ರಂಥಾಲಯ, ಉತ್ತಮ ಪರಿಸರ ಹಾಗೂ ಅತ್ಯುತ್ತಮ ಬೋಧಕ ವರ್ಗವೂ ಕಾಲೇಜಿನಲ್ಲಿದ್ದು ಫಲಿತಾಂಶವೂ ನೂರಕ್ಕೆ ನೂರರಷ್ಟು ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಈಚೆಗೆ ಭೇಟಿ ನೀಡಿದ್ದ ನ್ಯಾಕ್ ತಂಡವೂ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದು. ಅತ್ಯುತ್ತಮ ಲೇಖಕರ ಪಠ್ಯಪುಸ್ತಕಗಳಿದ್ದು ಸಮರ್ಪಕವಾಗಿ ಬಳಸಿಕೊಳ್ಳಿ, ಕಾರ್ಪೂರೇಟ್ ಪ್ರಪಂಚದ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದು ಕಳೆದ ಐದು ವರ್ಷದ ಹಿಂದಿನ ಪದವಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ, ಕಾಲೇಜಿನಲ್ಲಿ ಪದವಿಯಲ್ಲದೇ ಹಲವಾರು ವಿವಿಧ ಬಗೆಯ ನೂತನ ಕೋರ್ಸ್ ಗಳು ಲಭ್ಯವಿದ್ದು ಆಸಕ್ತಿಗೆ ತಕ್ಕಂತೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಬಹುದು ಎಂದು ತಿಳಿಸಿದರು.

ಮೈಸೂರು ವಿವಿಯಿಂದ ಈಚೆಗೆ ಪಿಹೆಚ್‍ಡಿ ಪದವಿ ಪಡೆದ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ.ನಾಗರಾಜ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ.ಎಂ.ಎನ್. ಮನೋಹರನ್ ಅಧ್ಯಕ್ಷತೆ ವಹಿಸಿದ್ದರು, ಅಡಳಿತ ಮಂಡಳಿಯ ಎಂ.ಪುಟ್ಟಸ್ವಾಮಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

Leave a Reply

comments

Related Articles

error: