ಮೈಸೂರು

ಗೌರಿ ಲಂಕೇಶ್ ಹತ್ಯೆ ದಿಟ್ಟತನದ, ಸತ್ಯಸಂದತೆಯ ಹತ್ಯೆ: ದೇವನೂರು ಮಹಾದೇವ

ಮೈಸೂರು, ಸೆ.೬: ಗೌರಿ ಲಂಕೇಶ್ ನಿರ್ಭಿಡೆ, ದಿಟ್ಟೆ, ಸತ್ಯಸಂದೆ. ಅವರ ಹತ್ಯೆ ನನಗೆ ಶಾಕ್ ನೀಡಿದೆ ಎಂದು ಸಾಹಿತಿ ದೇವನೂರು ಮಹಾದೇವ ಬೇಸರ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಸತ್ಯದ ಪರವಾಗಿ ನಿಂತವರು. ದಿಟ್ಟತನದಿಂದ ಹೋರಾಡುತ್ತಿದ್ದವರು. ಅವರ ಈ ಹತ್ಯೆ ಸತ್ಯಸಂದತೆಯ, ದಿಟ್ಟತನದ ಹತ್ಯೆಯಾಗಿದೆ. ಸಮಾಜದಲ್ಲಿ ತಮ್ಮ ದುಸ್ಥಿತಿಗೆ ಕಾರಣವಾದವರನ್ನು ಮುಗಿಸಬೇಕು ಎಂಬ ಮನಸ್ಥಿತಿಯನ್ನು ಉಳ್ಳವರಿಂದ ಇಂತಹ ಪೈಶಾಚಿಕ ಕೃತ್ಯಗಳು ನಡೆಯುತ್ತವೆ. ಬಡವ ಶ್ರೀಮಂತರ ನಡುವಿನ ವ್ಯತ್ಯಾಸದಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ಸತ್ಯದ ಪರವಾಗಿ ನಿಲ್ಲುವುದೇ ಕಷ್ಟವಾಗಿಬಿಟ್ಟಿದೆ. ನಿಜಕ್ಕೂ ಇದು ಖಂಡನೀಯ. ಪ್ರಕರಣದ ಸಮಗ್ರ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ಹೇಳಿದರು. (ವರದಿ ಬಿ.ಎಂ)

 

Leave a Reply

comments

Related Articles

error: