ಮೈಸೂರು

ಗೋಡೆ ಕುಸಿದು ಆರು ವರ್ಷದ ಬಾಲಕ ಸಾವು

ಮೈಸೂರು,(ಎಚ್.ಡಿ.ಕೋಟೆ),ಸೆ.6-ಮಂಗಳವಾರ ಸಂಜೆ ಸುರಿದ ಧಾರಕಾರ ಮಳೆಯಿಂದಾಗಿ ಮನೆ ಗೋಡೆ ಕುಸಿದು 6 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕೊಡಸೋಗೆ ಬಳಿ ಬುಧವಾರ ಮುಂಜಾನೆ ನಡೆದಿದೆ.

ಘಟನೆಯಲ್ಲಿ ಸಂದೇಶ್ ಮೃತಪಟ್ಟಿದ್ದಾನೆ. ಮುಂಜಾನೆಯ ನಿದ್ರೆ ಮಂಪರಿನಲ್ಲಿದ್ದಾಗ ಘಟನೆ ನಡೆದಿದ್ದು, ಸಂದೇಶ್ ಗೋಡೆ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಎಂ.ನಂಜುಂಡಯ್ಯ ಪರಿಶೀಲನೆ ನಡೆಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: