
ಕರ್ನಾಟಕಪ್ರಮುಖ ಸುದ್ದಿ
ಬೈಕ್ ರ್ಯಾಲಿ ತಡೆಗೆ ಪೊಲೀಸರ ಕಾವಲು
ರಾಜ್ಯ(ಮಂಡ್ಯ)ಸೆ.6:- ಬಿಜೆಪಿಯ ಮಂಗಳೂರು ಚಲೋ ಬೈಕ್ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ತಡೆಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪೊಲೀಸರ ಕಟ್ಟೆಚ್ಚರದ ನಡುವೆಯೇ ಶ್ರೀರಂಗಪಟ್ಟಣ ಮತ್ತು ಮದ್ದೂರಿನಲ್ಲಿ ಬೈಕ್ ಜಾಥಾ ನಡೆಸಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ರ್ಯಾಲಿಗೆ ಸಜ್ಜಾಗಿರೋ ಬಿಜೆಪಿ ಕಾರ್ಯಕರ್ತರು ಪೊಲೀಸರ ಆದೇಶ ಉಲ್ಲಂಘಿಸಿ ಜಾಥಾ ತೆರಳಲು ಸಿದ್ಧತೆ ನಡೆಸಿದ್ದಾರೆ. ಪೊಲೀಸರು ಕಾರ್ಯಕರ್ತರನ್ನು ಬಂಧಿಸಲು ಸಜ್ಜಾಗಿ ನಿಂತಿದ್ದು, ಎಲ್ಲೆಡೆಯೂ ಖಾಕಿ ಕಣ್ಗಾವಲಿದೆ. ಶ್ರೀರಂಗಪಟ್ಟಣ ಮತ್ತು ಮದ್ದೂರುನ ಮೈಸೂರುಬೆಂಗಳುರು ಹೆದ್ದಾರಿಯಲ್ಲಿ ಪೊಲೀಸರು ಕಟ್ಟೆಚ್ಚರ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)