ಮೈಸೂರು

ಸೆ.17ರಂದು ವಿಶ್ವಕರ್ಮ ಜಯಂತಿ

ಮೈಸೂರು,ಸೆ.6 : ಜಿಲ್ಲಾ ವಿಶ್ವಕರ್ಮ ಜಯಂತೋತ್ಸವ ಸಮಿತಿಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸೆ.17ರಂದು  ವಿಶ್ವಕರ್ಮ ಜಯಂತಿಯನ್ನು ಹಮ್ಮಿಕೊಂಡಿದೆ ಎಂದು ಸಮಿತಿ ಸದಸ್ಯ ಜಯರಾಮಾಚಾರ್ ತಿಳಿಸಿದರು.

ಬೆಳಗ್ಗೆ 11 ಗಂಟೆಗೆ ಕಲಾ ಮಂದಿರದಲ್ಲಿ  ನಡೆಯುವ 2ನೇ ವರ್ಷದ ವಿಶ್ವಕರ್ಮ ಜಯಂತಿಯೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ವಾಸು ನೇತೃತ್ವದಲ್ಲಿ ನಡೆಯಲಿದೆ. ಮರೆಮಾದನಹಳ್ಳಿ ಮಠದ ಶ್ರೀಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಭಾ ಕಾರ್ಯಕ್ರಮದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಹಿರಿಯ ಚಲನಚಿತ್ರ ನಟಿ ಭವ್ಯ ಸೇರಿದಂತೆ ವಿಧಾನ ಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಸಮಾಜದ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಅಂದು ಬೆಳಗ್ಗೆ 9ರಿಂದ ಕಾಳಿಕಾಂಬ ದೇವಸ್ಥಾನದಿಂದ ಆರಂಭವಾಗುವ ವಿಶ್ವಕರ್ಮ ಮೂರ್ತಿಯ ಬೆಳ್ಳಿ ರಥದ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಲಾಮಂದಿರ ತಲುಪುವುದು, ಮೆರವಣಿಗೆಯಲ್ಲಿ ವಿವಿಧ ಜಾನಪದ ತಂಡಗಳು, ಸುಮಂಗಲಿಯರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಹೇಳಿದರು.

ಒಂದು ದಿನದ ರಜೆ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸಮಿತಿಯ ರಂಗಪ್ಪ, ಲೋಕೇಶ್ ಸಿಂದುವಳ್ಳಿ, ರವಿಕುಮಾಋ್, ಪುಟ್ಟಸ್ವಾಮಾಚಾರ್, ಗೋವಿಂದಾಚಾರಿ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: