ಮೈಸೂರು

ಸೌರಶಕ್ತಿ ಬಳಸಿ, ಪರಿಸರ ರಕ್ಷಿಸಿ

ಸೌರಶಕ್ತಿ ಆಧಾರಿತ “ನವೀಕರಿಸಬಹುದಾದ ಸಾಮರ್ಥ್ಯದ ಶಕ್ತಿ” ವಿಷಯವಾಗಿ ಇತ್ತೀಚಿಗೆ ನಗರದ ಬನ್ನೂರು ರಸ್ತೆಯಲ್ಲಿರುವ ಎ.ಟಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣ ಜರುಗಿತು. ಬೆಂಗಳೂರಿನ ನ್ಯಾಷನಲ್ ಟ್ರೈನಿಂಗ್ ಫಾರ್ ಸೋಲಾರ್ ಟೆಕ್ನಾಲಜಿಯ ನಿರ್ದೇಶಕ ಡಾ. ಎಚ್. ನಾಗನಗೌಡ ಅವರು ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು.ಬಳಿಕ ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಸೌರ ಶಕ್ತಿಯನ್ನು ಬಳಸಿ ಪ್ರಯೋಗಗಳನ್ನು ನಡೆಸಬೇಕು.
atme2022ರ ವೇಳೆಗೆ ದೇಶದಲ್ಲಿ ಸೌರಶಕ್ತಿಯಿಂದ 160 ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉದ್ಯಮವಾಗಿ ಸ್ವೀಕರಿಸಿ ಮಾಲಿನ್ಯವನ್ನು ನಿಯಂತ್ರಿಸಬೇಕು ಎಂದು ಸೌರ ಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು. ಪ್ರಪಂಚವು ಕೆಟ್ಟವರ ದೌರ್ಜನ್ಯಕ್ಕಿಂತಲೂ ಸಜ್ಜನರ ಹಾಗೂ ವಿದ್ಯಾವಂತರ ಮೌನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ ಎಂದು ಇದೇ ಸಂದರ್ಭ ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಲ್. ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 100 ಕೆ.ವಿ. ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಚೆಸ್ಕಾಂ ಅಧಿಕಾರಿ ಸೋಮಶೇಖರ್ ಉದ್ಘಾಟಿಸಿದರು.

ಚೆಸ್ಕಾಂ ಮುಖ್ಯ ಇಂಜಿನಿಯರ್ ನರಸಿಂಹಗೌಡ, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಹೆಚ್. ವೆಂಕಟೇಶ್, ಪ್ರಾಂಶುಪಾಲ ಡಾ. ಎಲ್. ಬಸವರಾಜ್ ವಿವಿಧ ವಿಭಾಗಗಳ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಿ. ರತ್ನಾಕರ್ ಸ್ವಾಗತಿಸಿ, ಪ್ರೊ. ಯಶವಂತ್ ನಿರೂಪಿಸಿದರು. ಪ್ರೊ. ರಾಮಾನುಜ ವಂದಿಸಿದರು ಹಾಗೂ ಪ್ರೊ. ಮೋಹನ್ ಸೌರಶಕ್ತಿ ಘಟಕದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Leave a Reply

comments

Related Articles

error: