ಮೈಸೂರು

ಪ್ರಾಧ್ಯಾಪಕರಿಗೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ಶಿಕ್ಷಕರ ದಿನಾಚರಣೆ

ಮೈಸೂರು,ಸೆ.6:- ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.

ಜೆ.ಎಸ್.ಎಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಎಲ್ಲಾ ಪ್ರಾಧ್ಯಾಪಕ ಹಾಗೂ ಸಿಬ್ಬಂದಿ ವರ್ಗದವರಿಗೆ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಉಪಕುಲಪತಿ ಪ್ರೊ.ಸಂಗಮೇಶ್ವರ ಮಾತನಾಡಿ ಸ್ವಸ್ಥ ಹಾಗೂ ಖಾಯಿಲೆ ಮುಕ್ತ ಆರೋಗ್ಯ  ತಮ್ಮದಾಗಿಸಿಕೊಳ್ಳಲು ಸೂಕ್ತ ವ್ಯಾಯಾಮ ಅಗತ್ಯ ಎಂದರು. ವೈದ್ಯಕೀಯ ಪ್ರಾಧ್ಯಾಪಕ ಡಾ.ಎಂ.ಸುರೇಶ್ ಬಾಬು ಮಾತನಾಡಿ ಎಸಿಪಿ ಇಂಡಿಯಾ ಚಾಪ್ಟರ್ ಮುಂದೆ ನಗರದ ಎಲ್ಲ ಕಾಲೇಜು ವೃಂದಕ್ಕೆ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ಮಾಡಲಿರುವುದಾಗಿ ತಿಳಿಸಿದರು. ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಎನ್.ನಾಗಭೂಷಣ್, ರಿಜಿಸ್ಟ್ರಾರ್ ಪ್ರೊ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: