ಪ್ರಮುಖ ಸುದ್ದಿಮೈಸೂರು

ಮೈಸೂರು ವಿವಿಯಲ್ಲಿ ದಲಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ

ನೂತನ ಕುಲಸಚಿವ ರಾಜಣ್ಣ ಅವರ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ದಲಿತ ವಿದ್ಯಾರ್ಥಿಗಳು ಇಂದು (ಅ.26 ಬುಧವಾರ) ಪ್ರತಿಭಟನೆ ನಡೆಸಿದರು. ಕುಲಸಚಿವರ ಕಚೇರಿ ಮುಂಭಾಗ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕಚೇರಿಗೆ ಮುತ್ತಿಗೆ ಹಾಕಲು ಕೂಡ ಯತ್ನಿಸಿದ್ದಾರೆ. ಜಯಲಕ್ಷೀಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಳೆದ ಮೂರು ವರ್ಷಗಳಿಂದ ಕುಲಸಚಿವರ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೊ ಇತ್ತು, ಆದರೆ ಕಳೆದ ಎರಡು ದಿನಗಳಿಂದ ಫೋಟೊ ನಾಪತ್ತೆಯಾಗಿದೆ ಎನ್ನಲಾಗಿದೆ. ನೂತನ ಕುಲಸಚಿವ ರಾಜಣ್ಣ ಇದನ್ನು ತೆರವುಗೊಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Leave a Reply

comments

Related Articles

error: