ಪ್ರಮುಖ ಸುದ್ದಿಮೈಸೂರು

ಸಂಸದ ಪ್ರತಾಪ್ ಸಿಂಹ ಅವರಿಗೆ ಜೀವ ಬೆದರಿಕೆ ಸಂದೇಶ ರವಾನೆ : ನಗರ ಪೊಲೀಸ್ ಆಯುಕ್ತರಿಗೆ ದೂರು

ಮೈಸೂರು,ಸೆ.6:- ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಪ್ರತಿಧ್ವನಿಯೆಂಬಂತೆ  ಮೈಸೂರು ಕೊಡಗು ಸಂಸದ ಪ್ರತಾಪ್‌ ಸಿಂಹ ಅವರಿಗೂ ಅಪರಿಚಿತನೋರ್ವ  ಜೀವ ಬೆದರಿಕೆಯ ಸಂದೇಶ ರವಾನೆ ಮಾಡಿದ್ದಾನೆ ಎಂದು  ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ಸಂಸದ ಪ್ರತಾಪ್ ಸಿಂಹ ದೂರು ನೀಡಿದ್ದಾರೆ.
ಅನಂತಮೂರ್ತಿ .ಬಿ ಎಂಬಾತನ ಟ್ವಿಟರ್‌ ಅಕೌಂಟ್‌ನಿಂದ ಸಂಸದ ಪ್ರತಾಪ್ ಸಿಂಹಗೆ  ಜೀವ ಬೆದರಿಕೆಯ ಸಂದೇಶ ಟ್ವಿಟರ್‌ನಲ್ಲಿ ಬಂದಿದ್ದು, ಅಪರಿಚಿತ ವ್ಯಕ್ತಿ  ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.  ‘ನಾನು ಮುಂದೆ ಒಂದು ದಿನ … ಆದರೆ ಮುಗಿಸಿ ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರತಾಪ್‌ಸಿಂಹ ಇವರನ್ನು ‘ ಎಂದು  ಬೆದರಿಕೆ ಸಂದೇಶ ಹಾಕಿದ್ದಾನೆ ಎನ್ನಲಾಗಿದೆ.  ಸಂಸದ ಪ್ರತಾಪ್ ಸಿಂಹ ಅವರು ಟ್ವಿಟರ್‌ ಸಂದೇಶ ಹಾಗೂ ಸ್ಕ್ರೀನ್‌ ಶಾಟ್ ನೊಂದಿಗೆ ಮೈಸೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದು, ಈ ಕೂಡಲೇ ಆರೋಪಿಯನ್ನು ಬಂಧಿಸಿ ನನಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: