ಮೈಸೂರು

ರಾಜ್ಯ ಮಟ್ಟದ ಬಾಸ್ಕೆಟ್‍ಬಾಲ್‍ ಟೂರ್ನಮೆಂಟ್‍ಗೆ ಚಾಲನೆ

ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಎರಡು ದಿನಗಳ ರಾಜ್ಯ ಮಟ್ಟದ ಬಾಸ್ಕೆಟ್‍ಬಾಲ್ ಟೂರ್ನಮೆಂಟ್‍ಗೆ ಬುಧವಾರ ಚಾಲನೆ ನೀಡಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆ ಮೈಸೂರು ಸೆಂಟ್ರಲ್ ಪಿಯು ಕಾಲೇಜು ಸಹಯೋಗದೊಂದಿಗೆ ಈ ಟೂರ್ನಮೆಂಟ್‍ ಆಯೋಜಿಸಲಾಗಿದ್ದು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‍ಬಾಲ್ ಆಟಗಾರ ಪಿ.ಯು. ನವನೀತ ಉದ್ಘಾಟಿಸಿದರು.

ಮೈಸೂರು ವಿವಿ ದೈಹಿಕ ಶಿಕ್ಷಣ ಇಲಾಖೆ ಉಸ್ತುವಾರಿ ನಿರ್ದೇಶಕ ಡಾ. ಪಿ .ಕೃಷ್ಣಯ್ಯ ಮಾತನಾಡಿ, ಯುವಜನತೆಯು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಕೆಲ ರೋಗಗಳು ಜನರನ್ನು ಕಂಗೆಡಿಸುತ್ತಿದೆ. ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು, ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿಡಲು ಕ್ರೀಡೆ ಬಹು ಸಹಕಾರಿಯಾಗಿದೆ. ಯುವಜನತೆ ತಮ್ಮ ಆರೋಗ್ಯ ಸ್ಥಿರವಾಗಿಡಲು ತಮ್ಮನ್ನು ತಾವು ಹೆಚ್ಚಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿವಿಧ ಜಿಲ್ಲೆಯ 25 ಹುಡುಗರು ಮತ್ತು 24 ಹುಡುಗಿಯರ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

ಡಿಡಿಪಿಯು ರೆಜಿನಾ ಪಿ. ಮಾಲಕಿ, ನಿವೃತ್ತ ಡಿಡಿಪಿಯು ಕೆ.ಎಂ. ಪುಟ್ಟು, ಮೈಸೂರು ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಹೇಶ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: