ಮೈಸೂರು

ಅಂಚೆ ಏಜೆಂಟ್‍ಗಳ ನೇಮಕಕ್ಕೆ ಸೆ.11ರಂದು ನೇರ ಸಂದರ್ಶನ

ಮೈಸೂರು, ಸೆ.6 : ಮೈಸೂರು ಯಾದವಗಿರಿ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ವತಿಯಿಂದ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ ಏಜೆಂಟ್‍ಗಳ ನೇಮಕ ಮಾಡಲು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11.00 ಘಂಟೆಗೆ ಇಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಈ ನೇರ ಸಂದರ್ಶನಕ್ಕೆ ಅಭ್ಯಥಿಗಳು ಜನ್ಮ ದಿನಾಂಕ, ವಿದ್ಯಾರ್ಹತೆ, ಅನುಭವದ ವಿವರಗಳನ್ನೊಳಗೊಂಡ ಅರ್ಜಿ ಮತ್ತು ಪ್ರಮಾಣ ಪತ್ರದೊಂದಿಗೆ ಹಾಜರಾಗುವುದು. 5000 ಜನಸಂಖ್ಯೆಗಿಂತ ಕಡಿಮೆ ಇರುವ ಪ್ರದೇಶದ ಅಭ್ಯರ್ಥಿಗಳಾಗಿದ್ದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆ ಹೊಂದಿರಬೇಕು. 5000 ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶದ ಅಭ್ಯರ್ಥಿಗಳು ಸೆಕೆಂಡ್ ಪಿ.ಯು.ಸಿ.ಯಲ್ಲಿ ತೇರ್ಗಡೆ ಹೊಂದಿರಬೇಕು. ವಯೋಮಿತಿ 18 ರಿಂದ 65 ವರ್ಷಗಳು, ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ನಿಗದಿತ ಇನ್ಸೆಂಟಿವ್ ಹಣ ಕೊಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 0821-2417307/2417308 ಅಥವಾ ಲಕ್ಷ್ಮೀನಾರಾಯಣ, ಡಿ.ಒ (ಪಿಎಲ್‍ಐ), ಮೈಸೂರು – ಇವರನ್ನು ದೂರವಾಣಿ ಸಂಖ್ಯೆ 9449021312/8762965277 ಮೂಲಕ ಸಂಪರ್ಕಿಸಬಹುದು.

(ಎನ್.ಬಿ.)

Leave a Reply

comments

Related Articles

error: