ಮೈಸೂರು

ನಾಳೆ ರಾಜ್ಯಪಾಲರು ದಸರಾ ಉದ್ಘಾಟಕರು, ಸಿಎಂಗೆ ಅಧಿಕೃತ ಆಹ್ವಾನ: ಮಹದೇವಪ್ಪ 

ಮೈಸೂರು, ಸೆ.೬:  ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ನಡೆಯಿತು.

ಸಭೆಯಲ್ಲಿ ಸಚಿವ ಮಹದೇವಪ್ಪ ದಸರಾ ಸಿದ್ಧತೆಗಳ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಅವರು, ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ದಸರಾ ಉದ್ಘಾಟಕರು, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲಾ ವಜೂಬಾಯಿ ರೂಢಬಾಯಿ ವಾಲಾ ಅವರನ್ನು ಜಿಲ್ಲಾಡಳಿತದ ವತಿಯಿಂದ ಸೆ.೭ರಂದು ಅಧಿಕೃತ ಆಹ್ವಾನ ನೀಡಲಾಗುವುದು.  ಜಿಲ್ಲಾಧಿಕಾರಿ  ನೇತೃತ್ವದ ದಸರಾ ಕಾರ್ಯ ಕಾರಿ ಸಮಿತಿಯ ಸದಸ್ಯರು ಬೆಂಗಳೂರಿಗೆ ತೆರಳಿ, ರಾಜ್ಯಪಾಲರು, ಸಿಎಂ ಮತ್ತು ಕವಿ ನಿಸಾರ್ ಅಹಮ್ಮದ್ ಅವರನ್ನು ಆಹ್ವಾನಿಸಲಿದ್ದಾರೆ. ಎಂದ ಅವರು, ಸೆ.೮ರಂದು  ರಾಜವಂಶಸ್ಥೆ ರಾಣಿ ಪ್ರಮೋದಾ ದೇವಿ ಒಡೆಯರ್ ಅವರನ್ನು ಆಹ್ವಾನಿಸಲಾಗುವುದು ಎಂದ ಅವರು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರ ಗೌರವ ಧನವನ್ನು ೭೫೦ರೂ ನಿಂದ ಸಾವಿರ ರೂ ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ದಸರಾ ಮಹೋತ್ಸವ ಉಪ ಸಮಿತಿಗಳಲ್ಲಿ ಇದುವರೆವಿಗೂ ಅಧಿಕಾರಿಗಳು  ಮಾತ್ರ ಇದ್ದು, ಇನ್ನೇರಡು ದಿನಗಳಲ್ಲಿ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಿದ್ದು, ಪಟ್ಟಿ  ಬಿಡುಗಡೆ ಮಾಡಲಾಗುವುದು ಹೇಳಿದರು.

ಇದೇ ವೇಳೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಸೇವೆಗೆ ಚಾಲನೆ ನೀಡಿದರು.

ಸಭೆಯಲ್ಲಿ ಸಚಿವೆ ಡಾ.ಗೀತಾ ಮಹಾದೇವ ಪ್ರಸಾದ್,  ಶಾಸಕರಾದ  ಸಂದೇಶ ನಾಗರಾಜು, ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ, ಪುಟ್ಟರಂಗ ಶೆಟ್ಟಿ, ಮೇಯರ್ ಎಂ.ಜೆ.ರವಿ ಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: