ಸುದ್ದಿ ಸಂಕ್ಷಿಪ್ತ

ಆದಿವಾಸಿಗಳ ಸಮಸ್ಯೆ ಕುರಿತು ಚರ್ಚೆ

ಮೈಸೂರು ವಿವಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರವು ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ – ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ನಿರ್ದಿಷ್ಟ ದುರ್ಬಲ ಆದಿವಾಸಿಗಳ ಸಮಸ್ಯೆಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಆದಿವಾಸಿಗಳ ಕುರಿತು ನಿರ್ದಿಷ್ಟ ರೀತಿಯ ವೈಜ್ಞಾನಿಕ ಸಮೀಕ್ಷೆ ನಡೆಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವೇದಿಕೆಯಲ್ಲಿ ಡೀಡ್ ಸಂಸ್ಥೆಯ ಶ್ರೀಕಾಂತ್, ಡಾ. ಸುರೇಶ್ ಪಾಟೀಲ್, ಕೇಂದ್ರದ ಡಾ. ಡಿ.ಸಿ. ನಂಜುಂಡ, ಡಾ. ವಿ.ಜಿ. ಸಿದ್ದರಾಜು, ಡಾ. ದಿನೇಶ್ ಪಿ.ಟಿ ಉಪಸ್ಥಿತರಿದ್ದರು.

Leave a Reply

comments

Related Articles

error: