ಕರ್ನಾಟಕ

ವೈಭವಯುತವಾಗಿ ನಡೆದ ಅನಂತನ ಚತುರ್ದಶಿ

ರಾಜ್ಯ(ಹಾಸನ)ಸೆ.7:- ಶ್ರವಣಬೆಳಗೊಳ ಪಟ್ಟಣದ ಭಂಡಾರ ಬಸದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ 14 ನೇ ತೀರ್ಥಂಕರ ಅನಂತನಾಥ ಭಗವಾನರಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೈಭವವಾಗಿ ಅನಂತ ಚತುರ್ದಶಿ ನೋಂಪಿಯನ್ನು ಆಚರಿಸಲಾಯಿತು.

ಸೋಮವಾರದಿಂದ ಆರಂಭವಾಗಿರುವ ಧಾರ್ಮಿಕ ಕಾರ್ಯಕ್ರಮ ಬುಧವಾರದರರೆಗೆ 3 ದಿನಗಳ ಕಾಲ  ನೆರವೇರಿತು. ಈ ಕಾರ್ಯಕ್ರಮದಲ್ಲಿ 67 ದಂಪತಿಗಳು ಭಾಗಿಯಾಗಿ ನೋಂಪಿಯನ್ನು ಆಚರಿಸಿದರು. ಬೆಳಿಗ್ಗೆ ಭಂಡಾರ ಬಸದಿಯ 24 ತೀರ್ಥಂಕರರ ಪಂಚಾಮೃತ ಅಭಿಷೇಕ, ನೋಂಪಿ ವಿಧಾನ, 24 ತೀರ್ಥಂಕರರಿಗೆ ಸಾಮೂಹಿಕ ಅಷ್ಟವಿಧಾರ್ಚನೆ, ಯಂತ್ರಸ್ಥಾಪನೆ , 108 ಮಂತ್ರಪುಷ್ಪಾರ್ಚನೆ ನೆರವೇರಿಸಿ ಅನಂತನಾಥ ಭಗವಾನರಿಗೆ ಪ್ರತ್ಯೇಕವಾಗಿ 14 ವಿಧದ ಅಷ್ಟ ದ್ರವ್ಯಗಳಿಂದ ಅಷ್ಟವಿಧಾರ್ಚನೆಯನ್ನು  ನೆರವೇರಿಸಿದರು ನಂತರ ಅನಂತನಾಥ ತೀರ್ಥಂಕರರ ಪಾತಾಳ ಯಕ್ಷ ಮತ್ತು ಅನಂತಮತಿ ಯಕ್ಷಿಗೆ ಷೋಡಶೋಪಚಾರ ಪೂಜೆಯನ್ನು ನೆರವೇರಿಸಿ ದಂಪತಿಗಳು ಬಾಗಿನವನ್ನು ಬದಲಾಯಿಸಿಕೊಂಡರು.

ಕ್ಷೇತ್ರದ ಪ್ರತಿಷ್ಠಾಚಾರ್ಯರುಗಳಾದ ಎಸ್.ಡಿ.ನಂದಕುಮಾರ್, ಎಸ್.ಪಿ.ಉದಯಕುಮಾರ್ ಶಾಸ್ತ್ರಿ, ಪ್ರೇಂಕುಮಾರ್, ಪಾರ್ಶ್ವನಾಥ ಶಾಸ್ತ್ರಿ ಮತ್ತು ಜಿನೇಶ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಆಚಾರ್ಯರುಗಳಾದ ವರ್ಧಮಾನಸಾಗರ ಮಹಾರಾಜರು, ವಾಸೂಪೂಜ್ಯಸಾಗರ ಮಹಾರಾಜರು, ಪಂಚಕಲ್ಯಾಣಕಸಾಗರ ಮಹಾರಾಜರು, ಚಂದ್ರಪ್ರಭಸಾಗರ ಮಹಾರಾಜರು, ಅಮಿತಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಪಾವನ ಸಾನಿಧ್ಯ ವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: