ಕ್ರೀಡೆ

ಯುಎಸ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ

ನ್ಯೂಯಾರ್ಕ್,ಸೆ.7-ಇಲ್ಲಿನ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿದ್ದ ರೋಜರ್ ಫೆಡರರ್ ಅವರನ್ನು ಆರ್ಜೆಂಟಿನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ.

ಪಂದ್ಯಾವಳಿಯಲ್ಲಿ ಜುವಾನ್ 7-5, 3-6,7-6 (10/8), 6-4 ಅಂತರದಿಂದ ಜಯ ಸಾಧಿಸಿದರು. ಶುಕ್ರವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಜುವಾನ್ ಅಗ್ರ ಶ್ರೇಯಾಂಕದ ರಫೇಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ. ಜುವಾನ್ ಅವರು ಇಲ್ಲಿಯ ತನಕ 2009ರಲ್ಲಿ ತಮ್ಮ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಪಂದ್ಯಾವಳಿಯಲ್ಲಿ ಅವರು ನಡಾಲ್ ಅವರನ್ನು ಸೆಮಿ ಫೈನಲ್ ಹಂತದಲ್ಲಿಯೇ ಸೋಲಿಸಿದ್ದರು.

ವಿಶ್ವ ರ್ಯಾಂಕಿಂಗಿನಲ್ಲಿ 28ನೇ ಸ್ಥಾನದಲ್ಲಿರುವ ಜುವಾನ್ ಅವರು 19 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಅವರನ್ನು ಸೋಲಿಸಿ ಎಲ್ಲರನ್ನು ಆಶ್ಚಯಗೊಳಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ತಾವು 2009ರ ಇತಿಹಾಸವನ್ನು ಮರುಕಳಿಸುವ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಅವರು ವಿಶ್ವದ ನಂ.1 ಆಟಗಾರರೆಂದು ನನಗೆ ಗೊತ್ತು. ಆದರೆ ನಿಮ್ಮೆಲ್ಲರ ಬೆಂಬಲವಿದ್ದರೆ ಜಯ ಖಂಡಿತ ಸಾಧ್ಯ ಎಂದು ಹೇಳಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: