ಪ್ರಮುಖ ಸುದ್ದಿ

೧೯೯೩ರ ಮುಂಬೈ ಸ್ಫೋಟ ಪ್ರಕರಣ: ಅಬುಸಲೇಂಗೆ ಜೀವಾವಧಿ ಶಿಕ್ಷೆ 

ಪ್ರಮುಖ ಸುದ್ದಿ, ಮುಂಬೈ, ಸೆ.೭: ೧೯೯೩ರ ಮುಂಬೈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ೨೪ ವರ್ಷಗಳ ಬಳಿಕ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದೆ.

೧೯೯೩ರಲ್ಲಿ ಮುಂಬೈನಲ್ಲಿ ಸಂಭವಿಸಿದ ಸ್ಫೋಟದಲ್ಲಿ ನೂರಾರು ಜನರು ಸಾವನ್ನಪ್ಪಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯ ಸ್ಫೋಟ ಪ್ರಮುಖ ರೂವಾರಿ ಅಬುಸಲೇಂಗೆ ಜೀವಾವಧಿ ಹಾಗೂ ಕರಾಮುಲ್ಲಾ ಖಾನ್‌ಗೆ ಜೀವಾವಧಿಯೊಂದಿಗೆ ೨ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಫಿರೋಜ್, ಖಾನ್, ಮತ್ತು ತಾಹಿರ್, ಮರ್ಚೆಂಟ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ. ಜೂನ್ ನಲ್ಲಿ, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ ೬ ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲ ತೀರ್ಪು ನೀಡಿತ್ತು. (ವರದಿ ಬಿ.ಎಂ)

 

Leave a Reply

comments

Related Articles

error: