ಮೈಸೂರು

ಹೊಗೆ ಸೊಪ್ಪಿನ ಬೆಂಬಲ ಬೆಲೆಗೆ ಒತ್ತಾಯ : ಪ್ರತಿಭಟನೆಯ ಎಚ್ಚರಿಕೆ

ಮೈಸೂರು, ಸೆ.7 : ತಂಬಾಕು ಬೆಳೆಗೆ ಶೀಘ್ರವೇ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಹುಣಸೂರಿನ ಸತ್ಯ ಎಂ.ಎ.ಎಸ್ ಫೌಂಡೇಷನ್ ಸರ್ಕಾರವನ್ನು ಒತ್ತಾಯಿಸಿದೆ.

ಕೇಂದ್ರದಿಂದ ಹೊಗೆ ಸೊಪ್ಪಿಗೆ ಬೆಂಬಲ ಬೆಲೆ ಕೊಡಿಸಲು ರಾಜ್ಯದ ಸಂಸದರು ವಿಫಲವಾಗಿರುವುದನ್ನು ಖಂಡಿಸಿದ ಅವರು, ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಹಾಸನ ಜಿಲ್ಲೆಯ ಹೊಳೇನರಸೀಪುರ, ಅರಕಲಗೂಡು ತಾಲ್ಲೂಕುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 85933 ಹೇಕ್ಟೆರ್ ಪ್ರದೇಶದಲ್ಲಿ ಹೊಗೆ ಸೊಪ್ಪು ಬೆಳೆಯಲಾಗಿದ್ದು ಬೆಳೆದ ಹೊಗೆ ಸೊಪ್ಪಿಗೆ ಬೆಂಬಲ ಬೆಲೆಯಿಲ್ಲದೇ ರೈತರು ಬಸವಳಿಯುವಂತಾಗಿದೆ, ಪ್ರಸಕ್ತ ಸಾಲಿನಲ್ಲಿ ಪ್ರತಿ ಕೆಜಿ ಹೊಗೆ ಸೊಪ್ಪಿಗೆ 156 ರೂಗಳು ಏರಿ ನಂತರ ದಿನಗಳಲ್ಲಿ 130 ರಿಂದ 135 ರೂಗಳ ಇಳಿಕೆ ಕಂಡಿತು. ಪ್ರತಿ ಕೆಜಿ ಹೊಗೆಸೊಪ್ಪು ಬೆಳೆಯಲು ಕನಿಷ್ಠ 130 ರೂಗಳ ವೆಚ್ಚ ತಗುಲಲಿದ್ದು ಬೆಲೆಯ ಏರಿಳಿಕೆಯು ರೈತರನ್ನು ತೀರ ಸಂಕಷ್ಟಕ್ಕೀಡು ಮಾಡಿದೆ ಎಂದು  ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ವಿಷಾಧಿಸಿದರು.

ಐ.ಟಿ.ಸಿ. ಕಂಪನಿಯ ಇಬ್ಬಗೆಯ ನೀತಿಯಿಂದಾಗಿ ತಂಬಾಕು ಮಾರುಕಟ್ಟೆಯಲ್ಲಿ 29 ಕಂಪನಿಗಳಿದ್ದರು ಕೇವಲ 5-6 ಕಂಪನಿಗಳು ಮಾತ್ರ ಭಾಗವಹಿಸುತ್ತಿವೆ. ಹಲವಾರು ಕಂಪನಿಗಳು ಮುಚ್ಚಿವೆ. ಅದೇ ರೀತಿ ಕೆಲವು ರೈತ ಮುಖಂಡರು ಐ.ಟಿ.ಸಿ. ಕಂಪನಿಯರವನ್ನು ಉಪಯೋಗಿಸಿಕೊಂಡು ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು ಈ ಬಗ್ಗೆ ಗಮನಹರಿಸಿ ಎಲ್ಲಾ ಕಂಪನಿಗಳು ಭಾಗವಹಿಸಲು ಅನುಮತಿ ನೀಡಿ ರೈತರನ್ನು ಸಂಕಷ್ಟದಲ್ಲಿ ಕೈ ಹಿಡಿಯಬೇಕೆಂದು ಒತ್ತಾಯಿಸಿದರು.

ಪ್ರತಿ ಕೆಜಿ ತಂಬಾಕಿಗೆ 200 ರೂಪಾಯಿಗಳ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಬೇಕು, ನಮ್ಮ ಮನವಿಯನ್ನು ಸಿಎಂ ಸಿದ್ದರಾಮಯ್ಯನವರು ಪುರಸ್ಕರಿ ರೈತರ ಬಗ್ಗೆ ಕಾಳಜಿ ವಹಿಸಿ ಸಮಸ್ಯೆಯನ್ನು ಬಗೆಹರಿಸಿಬೇಕೆಂದು ಕೋರಿದ ಅವರು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಂಸ್ಥೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ಹೆಚ್.ಎಸ್.ವರದರಾಜು, ಹಂದನಹಳ್ಳಿ ರೈತ ಮುಖಂಡ ಬಸಪ್ಪ ಇದ್ದರು. ( ವರದಿ : ಕೆ.ಎಂ.ಆರ್)

Leave a Reply

comments

Related Articles

error: