ಸುದ್ದಿ ಸಂಕ್ಷಿಪ್ತ

ಅಂತರ ಕಾಲೇಜು ನಾಟಕ ಮತ್ತು ಜಾನಪದ ಸ್ಪರ್ಧೆ

ಕನ್ನಡ ಆಧುನಿಕ ರಂಗಭೂಮಿಗೆ 60 ಮತ್ತು 70ರ ದಶಕದಲ್ಲಿ ಕಾಲೇಜು ರಂಗಭೂಮಿ ಮಹತ್ವದ ಕೊಡುಗೆಯನ್ನು ನೀಡಿದೆ. ಆದರೆ ಇತ್ತೀಚಿನ ಕಂಪ್ಯೂಟರ್ ಯುಗದ ಸ್ಪರ್ಧಾ ಪ್ರಪಂಚದ ಓಟದಲ್ಲಿ ಕಾಲೇಜು ವಾತಾವರಣ ಕಲುಷಿತಗೊಂಡಿದೆ. ಕಾಲೇಜುಗಳಲ್ಲಿ ದೇಶೀಯ ಸಾಂಸ್ಕೃತಿಕ ವಾತಾವರಣವನ್ನು ಪುನರ್ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಂಗಾಯಣ ದಿಟ್ಟ ಹೆಜ್ಜೆಯನ್ನಿರಿಸಿದ್ದು ಅಂತರ ಕಾಲೇಜು ನಾಟಕ ಮತ್ತು ಜಾನಪದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆ ಮೂರು ಹಂತದಲ್ಲಿ ನಡೆಯಲಿದ್ದು ಆಯಾ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಡಿಸೆಂಬರ್ ಮೂರು ಮತ್ತು ನಾಲ್ಕನೇ ವಾರ ನಡೆಯುತ್ತದೆ. ವಿಭಾಗೀಯ ಮಟ್ಟ ಜನವರಿ ಮೊದಲ ವಾರ ಮತ್ತು ಕೊನೆಯ ವಾರ, ರಾಜ್ಯ ಮಟ್ಟದ ಸ್ಪರ್ಧೆಗಳ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.  ಸ್ಪರ್ಧೆಯಲ್ಲಿ ಎಂಟು ತಂಡಗಳು ಭಾಗವಹಿಸಬಹುದಾಗಿದ್ದು ಆಸಕ್ತರು ನವೆಂಬರ್ 10 ರ ಒಳಗೆ ಅರ್ಜಿ ಸ್ವೀಕರಿಸಿ ನವೆಂಬರ್ 15 ರ ಒಳಗೆ ಭರ್ತಿ ಮಾಡಿ ತಲುಪಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 2512639 ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: