ಸುದ್ದಿ ಸಂಕ್ಷಿಪ್ತ

ಗೌರಿ ಲಂಕೇಶ್ ಹತ್ಯೆ ಪ್ರಗತಿಪರ ಚಿಂತಕರನ್ನು ಮಟ್ಟಹಾಕುವಂತ ಕೃತ್ಯವಾಗಿದೆ: ಎನ್.ಟಿ.ಆನಂದ್

ಸೋಮವಾರಪೇಟೆ, ಸೆ.7: ಹಿರಿಯ ಪತ್ರಕರ್ತೆ ಹಾಗೂ ಸಾಹಿತಿ ಗೌರಿ ಲಂಕೇಶ್ ಅವರ ಭೀಕರ ಹತ್ಯೆ ಪ್ರಗತಿಪರ ಚಿಂತಕರನ್ನು ಮಟ್ಟಹಾಕುವಂತ ಕೃತ್ಯವಾಗಿದೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಟಿ.ಆನಂದ್ ಹೇಳಿದ್ದಾರೆ.

ಈ ಕೃತ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗು ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಇಂತಹ ಕೃತ್ಯ ಖಂಡನೀಯ, ಕೂಡಲೆ ಹಂತಕರನ್ನು ಬಂಧಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಪ್ರತಿಕೆ ಹಾಗು ಹೋರಾಟ ಮೂಲಕ ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ಜನರಿಗೆ ತಲುಪಿಸುತ್ತಿದ್ದರು. ಇವರ ಪ್ರಗತಿಪರ ಚಿಂತನೆಗಳನ್ನು ಒಪ್ಪದವರು ಕಾನೂನಾತ್ಮಕವಾಗಿ ಎದುರಿಸಲು ಸಾಧ್ಯವಾಗದ ಹೇಡಿಗಳು ಕೊಂದಿದ್ದಾರೆ ಎಂದು ಹೇಳಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: