ಮೈಸೂರು

ಮೈಸೂರು ವಾರಿಯರ್ಸ್‍ನಿಂದ 3 ಲಕ್ಷ ರು. ದೇಣಿಗೆ

ಸೈಕಲ್ ಪ್ಯೂರ್ ಅಗರಬತ್ತಿಗಳ ತಯಾರಕರಾದ ಎನ್‍ಆರ್ ಸಮೂಹದ ಐಪಿಎಲ್ ತಂಡ “ಮೈಸೂರ್ ವಾರಿಯರ್ಸ್” ವತಿಯಿಂದ 3 ಮಂದಿ ಪಾಲುದಾರರಿಗೆ ತಲಾ ಒಂದು ಲಕ್ಷ ರು.ನಂತೆ 3 ಲಕ್ಷ ರು. ದೇಣಿಗೆ ನೀಡಲಾಯಿತು. ಎನ್.ಆರ್. ಸಮೂಹದ ಅಧ್ಯಕ್ಷ ಗುರು ಅವರು ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೇಣಿಗೆ ವಿತರಿಸಿದರು.

ಮೈಸೂರು ವಾರಿಯರ್ಸ್ ತಂಡ ಫೋರ್ ಮತ್ತು ಸಿಕ್ಸ್‍ಗಳಿಂದ ಗಳಿಸಿದ ಸ್ಕೋರ್ ಮತ್ತು ವಿಕೆಟ್‍ಗಳಿಂದ 2.5 ಲಕ್ಷ ರು. ಗಳಿಸಿದ್ದು, ಸೈಕಲ್ ಪ್ಯೂರ್‍ ಅಗರಬತ್ತಿಯವರು ಹೆಚ್ಚುವರಿಯಾಗಿ 95 ಸಾವಿರ ರು. ಸೇರಿಸಿ ಡಾಯ್ಟ್ ಕ್ಲೆಫ್ಟ್ ಕಿಂಡರ್‍ಲೈಫ್ ಅಂತಾರಾಷ್ಟ್ರೀಯ ಸಂಸ್ಥೆ ಕಲಿಸು ಪ್ರತಿಷ್ಠಾನ ಮತ್ತು ಉಷಾಕಿರಣ ಕಣ್ಣಿನ ಆಸ್ಪತ್ರೆಗೆ ತಲಾ ಒಂದು ಲಕ್ಷದಂತೆ ಮೂರು ಲಕ್ಷ ರೂ. ಚೆಕ್‍ಗಳನ್ನು ಕೂಡ ವಿತರಿಸಿದರು. ಡಾಯ್ಟ್ ಕ್ಲಫ್ ಕಿಂಡರ್‍ಲೈಫ್ ಅಂತಾರಾಷ್ಟ್ರೀಯ ಸಂಸ್ಥೆಯು ಹಣವನ್ನು ಮಕ್ಕಳ ಸೀಳು ತುಟಿ ಸರಿಪಡಿಸುವ ಚಿಕಿತ್ಸೆಗೆ ಬಳಸಿಕೊಳ್ಳಲಿದ್ದು, ಉಷಾಕಿರಣ ಸಂಸ್ಥೆಯು ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಲಿದೆ ಎಂದು ಎನ್.ಆರ್. ಸಮೂಹದ ಅಧ್ಯಕ್ಷ ಗುರು ಹೇಳಿದರು.

ಕಲಿಸು ಪ್ರತಿಷ್ಠಾನದ ನಿಖಿಲೇಶ್, ರವಿಶಂಕರ್ ಇದ್ದರು.

Leave a Reply

comments

Related Articles

error: