ಮೈಸೂರು

೨೧ದಿನಗಳ ಭಾಷಾಂತರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ 

ಮೈಸೂರು, ಸೆ.೭: ರಾಷ್ಟ್ರೀಯ ಅನುವಾದ ಮಿಷನ್ ವತಿಯಿಂದ ನಗರದ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ೨೧ ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಿತು.

ಈ ವೇಳೆ ಮಾತನಾಡಿದ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್, ಭಾಷಾ ಬೆಳವಣಿಗೆ ಮಾಡುವ ಉzಶದಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಷಾಂತರ ಮಾಡಬೇಕಾದರೆ ಕೌಶಲಗಳು ತುಂಬಾ ಮುಖ್ಯ. ಅಂತಹ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಇಂದು ಶಿಕ್ಷಣ ಕ್ಷೇತ್ರ ತುಂಬಾ ಅಭಿವೃದ್ಧಿ ಯಾಗಿದ್ದು, ಜ್ಞಾನ ವೃದ್ಧಿಗೆ ಲಭ್ಯವಿರುವ ಗ್ರಂಥಗಳ ಅಭಿವೃದ್ಧಿಗೆ ಭಾಷಾಂತರ ಅವಶ್ಯಕ. ರಾಷ್ಟ್ರೀಯ ಅನುವಾದ ಮಿಷನ್ ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ತರಬೇತಿ ವೇಳೆ ಸಂಪನ್ಮೂಲ ಅಧಿಕಾರಿಗಳು ಭಾಷಾಂತರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದು ಆಸಕ್ತ ಭಾಷಾಂತರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಸ್ಮಾನಿಯಾ ವಿಶ್ವವಿದ್ಯಾನಿಲಯದ ಪ್ರೊ.ಟಿ.ವಿಜಯ್‌ಕುಮಾರ್, ಹೈದರಾಬಾದ್‌ನ ಆಂಗ್ಲ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮಾಯಾಪಂಡಿತ್, ರಾಷ್ಟ್ರೀಯ ಅನುವಾದ ಮಿಷನ್‌ನ ಉಸ್ತುವಾರಿ ಅಧಿಕಾರಿ ತಾರಿಖ್ ಖಾನ್, ಭಾಷಾಂತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವರಾಮ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: