ಕರ್ನಾಟಕ

ರಾಷ್ಟ್ರ ಮತ್ತು ಸಮಾಜ ನಿರ್ಮಾಣಕ್ಕಾಗಿ ವಿದ್ಯಾವಿಕಾಸ ಯೋಜನೆಗಳಡಿ ವಿದ್ಯಾಸಂಸ್ಥೆಗಳ ಸ್ಥಾಪನೆ: ಜವಾಹಾರ್‍ಲಾಲ್ ಜೈನ್

ರಾಜ್ಯ(ಹಾಸನ)ಸೆ.7:- ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಪಟ್ಟಣದ ವಿಂಧ್ಯಗಿರಿ ತಪ್ಪಲಿನ ಸ್ವಾಗತ ಕಾರ್ಯಾಲಯದ ಬಳಿ ಆರಂಭಗೊಂಡ ವಿದ್ಯಾ ವಿಕಾಸ ಯೋಜನೆಯ ಕಛೇರಿಯನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು.
ಸ್ವಾಮೀಜಿವರ ಪ್ರೇರಣೆಯಂತೆ ರಾಷ್ಟ್ರ ಮತ್ತು ಸಮಾಜ ನಿರ್ಮಾಣಕ್ಕಾಗಿ ವಿದ್ಯಾವಿಕಾಸ ಯೋಜನೆಗಳ ಅಡಿಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ವಿದ್ಯಾಸಂಸ್ಥೆಗಳ ಸ್ಥಾಪನೆ ಹಾಗೂ ಮತ್ತಿತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿದ್ಯಾ ವಿಕಾಸ ಯೋಜನೆಯ ಮುಖ್ಯ ಸಂಯೋಜಕ ಜವಾಹಾರ್‍ಲಾಲ್ ಜೈನ್ ತಿಳಿಸಿದರು.
ಈ ವೇಳೆ ಶ್ರವಣಬೆಳಗೊಳ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಎಸ್.ಎಸ್.ಪೌದನ್ ಜೈನ್, ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದ ಶೈಕ್ಷಣಿಕ ಅಧಿಕಾರಿ ಗೋಮಟೇಶ ಎಂ.ರಾವನ್ನವರ್, ಪ್ರತಿಷ್ಠಾಚಾರ್ಯರಾದ ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: