ಪ್ರಮುಖ ಸುದ್ದಿಮೈಸೂರು

ಕರ್ತವ್ಯ ಲೋಪ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ  ಕೃಷ್ಣರಾಜ ಸಂಚಾರ ಠಾಣೆಯ ಮುಖ್ಯ ಪೇದೆ ಕುಮಾರಸ್ವಾಮಿ, ಪೇದೆ ಸೋಮಶೇಖರ್ ಎಂಬುವರನ್ನು ಅಮಾನತುಗೊಳಿಸಲಾಗಿದೆ.

ಅ.19 ರಂದು ರಾತ್ರಿ ಟೊಮೆಟೊ ತುಂಬಿಕೊಂಡು ತೆರಳುತ್ತಿದ್ದ ಟ್ರಕ್ ಒಂದನ್ನು ತಡೆದಿದ್ದ ಪೊಲೀಸರು, ಡ್ರಂಕ್ ಅಂಡ್ ಡ್ರೈವ್ ಅಡಿ ಪ್ರಕರಣ ದಾಖಲಿಸಿ ವಾಹನವನ್ನು ವಶಕ್ಕೆ ಪಡೆದಿದ್ದರು. ಆಗ ಚಾಲಕ ಠಾಣೆ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಪ್ರಕರಣ ದಾಖಲಿಸದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ವಾಹನ ಬಿಟ್ಟು ಕಳುಹಿಸಿದ್ದರು. ಆಗ ಪೇದೆ ಸೋಮಶೇಖರ್ ಕರ್ತವ್ಯದಲ್ಲಿ ಇಲ್ಲದಿದ್ದರೂ ಸ್ಥಳದಲ್ಲಿ ಇದ್ದರು. ಈ ಬಗ್ಗೆ ದೇವರಾಜ ಸಂಚಾರ ವಿಭಾಗದ ಎ.ಸಿ.ಪಿ. ಕೆ.ಎನ್. ಮಾದಯ್ಯ ಅವರು ನೀಡಿದ ವರದಿ ಮೇರೆಗೆ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ಎನ್. ರುದ್ರಮುನಿ ಹೇಳಿದ್ದಾರೆ.

Leave a Reply

comments

Related Articles

error: