ಕರ್ನಾಟಕಮೈಸೂರು

ಸೆ.12 ರಂದು ದಸರಾ ನಾಡಕುಸ್ತಿ ಜೋಡಿ ಕಟ್ಟುವ ಸಲುವಾಗಿ ಕುಸ್ತಿಪಟುಗಳಿಗೆ ವಿವಿಧ ಸ್ಪರ್ಧೆ

ಮೈಸೂರು, ಸೆ.7 : ಮೈಸೂರು ದಸರಾ ಮಹೋತ್ಸವ 2017ರ ಕುಸ್ತಿ ಉಪಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ನಾಡಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಕುಸ್ತಿ ಆಡುವ ಜೋಡಿಗಳನ್ನು ಆಯ್ಕೆ ಮಾಡುವ ಸಲುವಾಗಿ ಸೆ.12 ರಂದು ಬೆಳಿಗ್ಗೆ 10 ಗಂಟೆಯಿಂದ ನಾಡಕುಸ್ತಿ ಜೋಡಿ ಕಟ್ಟುವ ಕಾರ್ಯವನ್ನು ಪಿ.ಕಾಳಿಂಗರಾವ್ ಸಭಾಂಗಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು ಇಲ್ಲಿ ಜೋಡಿ ಕಟ್ಟುವ ಕಾರ್ಯ ನಡೆಯಲಿದೆ.

ಆಸಕ್ತ ಕುಸ್ತಿಪಟುಗಳು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ ಆಳೇತ್ತರದ ಭಾವಚಿತ್ರದೊಂದಿಗೆ ಈ ಜೋಡಿ ಕಟ್ಟುವ ಕಾರ್ಯದಲ್ಲಿ ಭಾಗವಹಿಸಬಹುದು. ಆಯೋಜಕರು ನೀಡುವ ಸಲಹೆ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.

ಕುಸ್ತಿಪಟುಗಳು ಹೆಚ್ಚಿನ ವ್ಯಾಯಾಮದಲ್ಲಿ ತೊಡಗಿ ತಮ್ಮ ದೇಹ ಅಭಿವೃದ್ಧಿ ಪಡಿಸಿಕೊಳ್ಳುಲು ಪ್ರೋತ್ಸಾಹಿಸುವ ಸಲುವಾಗಿ ಕುಸ್ತಿಪಟುಗಳಿಗೆ ಎರಡು ಕೈಗಳಿಂದ ಗದ್ದೆ ತಿರುಗಿಸುವ ಸ್ಪರ್ಧೆ, ಗರ್ದನಕಲ್ಲನ್ನು ಭುಜದ ಮೇಲೆ ಇಟ್ಟುಕೊಂಡು ಬೈಸಿಗೆ ಹೊಡೆಯುವ ಸ್ಪರ್ಧೆ, ಬೈಸಿಗೆ ಮತ್ತು ದಂಡ ಹೊಡೆಯುವ ಸ್ಪರ್ಧೆ, ಸ್ಪರ್ಧೆಗೆ ಸಂಬಂಧಿಸಿದಂತೆ ಆಯೋಜಕರು ನೀಡುವ ಸಲಹೆ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ವಿಜೇತ ಸ್ಪರ್ಧಾಳುಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಆಸಕ್ತರು ತಮ್ಮ ಹೆಸರನ್ನು ಕುಸ್ತಿ ಉಪಸಮಿತಿಯ ಕಾರ್ಯಾಲಯದಲ್ಲಿ ನೊಂದಾಯಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ಕುಸ್ತಿ ಉಪಸಮಿತಿಯನ್ನು ಸಂಪರ್ಕಿಸಬಹುದು ಎಂದು ಕುಸ್ತಿ ಉಪಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: