ಕರ್ನಾಟಕ

ಗೌರಿ ಲಂಕೇಶ್ ಆಪ್ತ ಭಾಸ್ಕರ್‍ಗೆ ಜೀವ ಬೆದರಿಕೆ ಕರೆ

ಬೆಂಗಳೂರು.ಸೆ.8: ಗೌರಿ ಲಂಕೇಶ್ ಹತ್ಯೆಯ ನಂತರ ಅವರ ಆಪ್ತ ಭಾಸ್ಕರ್ ಪ್ರಸಾದ್‍ಗೆ ಅನಾಮದೇಯ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ.

. ಬುಧವಾರ ರಾತ್ರಿ 1:30ಕ್ಕೆ ಮಂಗಳೂರು ಮೂಲದ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಡಿಜಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ಮೂರೆ ಮೂರು ದಿನಗಳಲ್ಲಿ ಹತ್ಯೆ ಮಾಡುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಸಿದ್ದಾನೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ. ಕರೆ ಬಂದ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.( ವರದಿ: ಪಿ.ಜೆ)

Leave a Reply

comments

Related Articles

error: