ಕರ್ನಾಟಕಪ್ರಮುಖ ಸುದ್ದಿ

ಕಲ್ಲೆತ್ತಿ ಹಾಕಿ ಯುವಕನ ಕೊಲೆ

ರಾಜ್ಯ(ಮಂಡ್ಯ)ಸೆ.8:- ಯುವಕನೋರ್ವನ ಮೇಲೆ ಕಲ್ಲು ಎತ್ತಿ ಹಾಕಿ  ಭೀಕರವಾಗಿ ಕೊಲೆಗೈದ ಘಟನೆ ಮದ್ದೂರು ಪಟ್ಟಣದ ಟಿಎಪಿಎಂಎಸ್ ಗೋಡನ್ ಹಿಂಭಾಗದಲ್ಲಿ ನಡೆದಿದೆ .

ಮೃತನನ್ನು ಕನಕಪುರ ಮೂಲದ ನವೀನ್ ಎಂದು ಗುರುತಿಸಲಾಗಿದ್ದು,  ಈತನ ಕಾಲುಗಳನ್ನು ಕಟ್ಟಿ ಹಾಕಿ ತಲೆಯ ಮೇಲೆ ಕಲ್ಲೆತ್ತಿ ಹಾಕಿ ಅಮಾನುಷವಾಗಿ ಕೊಲೆಗೈಯ್ಯಲಾಗಿದೆ. ಈತ ಮಂಡ್ಯದಲ್ಲಿ ವಾಸವಿದ್ದು ಮಂಡ್ಯದ ಹಾಗೂ  ಮದ್ದೂರಿನಲ್ಲಿ ಪ್ರತಿದಿನ ಲೋಡರ್ಸ್  ಮೂಟೆಗಳನ್ನು ಎತ್ತಲು ಬರುತ್ತಿದ್ದ ಎಂದು ಸ್ಥಳೀಯ ಲೋಡರ್ಸ್ ಗಳು ತಿಳಿಸಿದ್ದಾರೆ ಸ್ಥಳಕ್ಕೆ ಪಿಎಸ್ಐ ಕುಮಾರ್ ಆಗಮಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಕೊಲೆಗೆ ಕಾರಣಗಳು, ಯಾತಕ್ಕಾಗಿ ಕೊಲೆ ನಡೆದಿದೆ ಎನ್ನುವ ಕುರಿತು ಪೊಲೀಸ್ ತನಿಖೆಯ ಬಳಿಕವೇ ಮಾಹಿತಿ ಲಭ್ಯವಾಗಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: