ಮೈಸೂರು

ಶಾಸಕರ ಕುಮ್ಮಕ್ಕಿನಿಂದ ದಲಿತ ಮೇಲೆ ಪೊಲೀಸರ ದೌರ್ಜನ್ಯ : ಆರೋಪ

ಮೈಸೂರು, ಸೆ.8- ಮಹಿಳೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ವಿರುದ್ಧ ಪ್ರತಿಭಟನೆ ಮಾಡಿದ ದಲಿತರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಮಂಡಲ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ತಿಳಿಸಿದರು.

ಸಮಾರಂಭವೊಂದರಲ್ಲಿ ಮಹಿಳೆ ಕುರಿತು ಹೇಳಿಕೆ ನೀಡಿರುವ ಮಂಜುನಾಥ್ ಅವರು, ಸಾಮಾಜಿಕ ಹರಿಕಾರ ದೇವರಾಜ ಅರಸು ಅವರ ವೇದಿಕೆ ಹಂಚಿಕೊಳ್ಳಲು ದಲಿತ ಸಮುದಾಯ ಸೇರಿದಂತೆ ಹಲವು ಸಂಘಟನೆಯವರು ಹುಣಸೂರಿನ ನಗರ ಸಭೆಯ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಜಾರಿಗೊಳಿಸಿ 50ರಿಂದ 60 ಜನ ದಲಿತರ ವಿರುದ್ಧ ಪ್ರಕರಣ ದಾಖಲು ಮಾಡಿರುವುದು ದುರುದ್ದೇಶಪೂರಕವಾಗಿದೆ ಎಂದು ದೂರಿದರು.

ಶಾಸಕರ ಗಮನಕ್ಕೆ ಬಂದು ಈ ಎಲ್ಲಾ ಪ್ರಕರಣಗಳು ನಡೆಯುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ನಿರಪರಾಧಿ ದಲಿತರ ಮೇಲೆ ಹಾಕಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳದಿದ್ದರೆ ಮುಂದೆ ಶಾಸಕರು ದೊಡ್ಡ ಬೆಲೆ ತರಬೇಕಾಗಿರುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಲದ ಮುಖಂಡ ಚಂದ್ರಶೇಖರ್ ಗಾವಡಗೆರೆ, ವಿಶ್ವಕರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಪುಟ್ಟ ಸ್ವಾಮಾಚಾರ್ ಹಾಗೂ ಜಾಕೀರ್ ಹುಸೇನ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: