ಮೈಸೂರು

ಮಹಾಜನ ಕಾಲೇಜಿನ ವಾರ್ಷಿಕ ಸಂಚಿಕೆ ‘ಮಂದಾರ’ ಬಿಡುಗಡೆ

ಒಂದು ಶಿಕ್ಷಣ ಸಂಸ್ಥೆಯ ವಾರ್ಷಿಕ ಸಂಚಿಕೆ ಕೇವಲ ಭೌತಿಕ ಕೃತಿಯಲ್ಲ. ಅದು ಆ ಸಂಸ್ಥೆಯ ಉಸಿರು. ಅನುಭವಕ್ಕೊಂದು ಭಾಷೆ ಕೊಡುವುದು – ಮತ್ತೊಬ್ಬರಿಗೆ ಮನಮುಟ್ಟುವಂತೆ ತಿಳಿಸುವುದು ಕಷ್ಟ. ಆ ದಾರಿಯಲ್ಲಿ ತಲ್ಲಣ, ತೊದಲುಗಳು ಸಹಜ ಎಂದು ನಗರದ ಸೇಂಟ್ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ ತಿಳಿಸಿದರು.

ಎಸ್‍ಬಿಆರ್‍ಆರ್‍ ಮಹಾಜನ ಪ್ರಥಮದರ್ಜೆ ಕಾಲೇಜಿನ 2015-16 ನೇ ಸಾಲಿನ ‘ಮಂದಾರ’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಂದಾರದಲ್ಲಿರುವ ವಿದ್ಯಾರ್ಥಿಗಳ ಲೇಖನ, ಕವಿತೆಗಳನ್ನು ಪ್ರಸ್ತಾಪಿಸಿದ ಅವರು, ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲ. ಒಳ್ಳೆ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದರು.

ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವ ಮೂರ್ತಿ, ಕಾರ್ಯದರ್ಶಿ ವಿಜಯಲಕ್ಷ್ಮೀ, ಪ್ರಾಂಶುಪಾಲ ಕೆ.ವಿ. ಪ್ರಭಾಕರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್‍.ಆರ್. ತಿಮ್ಮೇಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: