ಕರ್ನಾಟಕ

ಧಾರ್ಮಿಕ ಪ್ರಜ್ಞೆಯ ಕೊರತೆಯಿಂದಾಗಿ ಸಮಾಜದಲ್ಲಿ ಭ್ರಷ್ಟಾಚಾರ : ವಿ.ವೆಂಕಟರಾಮೇಗೌಡ ಬೇಸರ

ರಾಜ್ಯ(ಮಂಡ್ಯ) ಸೆ.8:- ಜನರಿಗೆ ಧಾರ್ಮಿಕ ಪ್ರಜ್ಞೆಯ ಕೊರತೆಯಿಂದಾಗಿ ಸಮಾಜದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರಗಳು ಹೆಚ್ಚುತ್ತಿವೆ ನಿವೃತ್ತ ಶಿಕ್ಷಕ ವಿ.ವೆಂಕಟರಾಮೇಗೌಡ ಎಂದು ಬೇಸರ ವ್ಯಕ್ತಪಡಿಸಿದರು.

ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮಹಿಳಾ ಜ್ಞಾನವಿಕಾಸ ಕೇಂದ್ರ ಅರಳಕುಪ್ಪೆ ವಲಯ ಆಯೋಜಿಸಿದ್ದ `ಧಾರ್ಮಿಕ ಜಾಗೃತಿ ಮತ್ತು ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಹೆಚ್ಚು ಧಾರ್ಮಿಕ ಪ್ರಜೆ ಮೂಡಿಸುವ ಕೆಲಸವಾಗಬೇಕಿದೆ, ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಬೇಕು. ಧರ್ಮ, ದೇವರು ಬಗ್ಗೆ ಭಕ್ತಿಮೂಡಿಸಬೇಕು, ಗುರು-ಹಿರಿಯರನ್ನು ಗೌರವಿಸುವ ಪೂಜ್ಯನೀಯ ಭಾವನೆಯಿಂದ ಕಾಣುವ ಮನೋಭಾವಗಳನ್ನು ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಅನಸೂಯ, ತಾಪಂ ಅಧ್ಯಕ್ಷೆ ರಾಧಮ್ಮಕೆಂಪೇಗೌಡ, ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷರಾದ ರೇವಣ್ಣ, ಚಂದ್ರೇಗೌಡ, ಸಣ್ಣನಿಂಗೇಗೌಡ, ಎಪಿಎಂಸಿ ಉಪಾಧ್ಯಕ್ಷ ಜಗದೀಶ್, ಯೋಜನಾಧಿಕಾರಿ ಮೇದಪ್ಪ, ಲಿಂಗನಾಯ್ಕ ಸೇರಿದಂತೆ ಅರಳಕುಪ್ಪೆ,ಸೀತಾಪುರ,ಹೊಸೂರು, ಜೈಪುರ, ಜೆ.ಮಲ್ಲೇನಹಳ್ಳಿ, ಕಟ್ಟೇರಿ ಮತ್ತಿತರರು ಉಪಸ್ಥಿತರಿದ್ದದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: