ಮೈಸೂರು

ಡಾ.ಚಿಂತನಾ ಪಾಟ್ಕರ್ ರಂಗಪ್ರವೇಶ

ವಿದ್ವಾನ್ ಶ್ರೀಧರ್ ಜೈನ್ ಅವರ ನಿಮಿಷಾಂಬ ನೃತ್ಯ ಶಾಲೆಯ ವಿದ್ಯಾರ್ಥಿನಿ ಡಾ.ಚಿಂತನಾ ಪಾಟ್ಕರ್ ಅವರು ಇತ್ತೀಚಿಗೆ ಜಗನ್ಮೋಹನ ಆಡಿಟೋರಿಯಂನಲ್ಲಿ ರಂಗಪ್ರವೇಶ ಮಾಡಿದರು.

ಡಾ.ಚಿಂತನಾ ನಗರದಲ್ಲಿ ಅನಸ್ತೇಶಿಯಾಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೃತ್ಯಗಾರ್ತಿ ಮತ್ತು ನಟಿ ಡಾ.ಸೀತಾ ಕೋಟೆ, ಮಕ್ಕಳ ವೈದ್ಯೆ ಮತ್ತು ನೃತ್ಯಗಾರ್ತಿ ಡಾ. ರಾಜೇಶ್ವರಿ ಮಾದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪುಷ್ಪಾಂಜಲಿಯಿಂದ ನೃತ್ಯ ಆರಂಭಿಸಿದ ಡಾ.ಚಿಂತನಾ, ಗಣೇಶ ಶ್ಲೋಕ, ನಟರಾಜ ಮತ್ತು ಗುರು ವಂದನ, ತ್ರಿಶ್ರಾ ಏಕತಾಳದಲ್ಲಿ ‘ತಂಬೂರಿ ಮೀಟಿದವ’ ದೇವರನಾಮಕ್ಕೆ ಅಲರಿಪು ನೃತ್ಯ ಮಾಡಿದರು.

ವಿದ್ವಾನ್ ಶ್ರೀಧರ್ ಜೈನ್ ನಟುವಾಂಗ, ವಿದುಷಿ ರಾಜೇಶ‍್ವರಿ ಪಂಡಿತ್ ಸಂಗೀತ, ವಿದ್ವಾನ್ ಶಾಂತಕುಮಾರ್ ವಯೋಲಿನ್ ಮತ್ತು ವಿದ್ವಾನ್ ಜಿ.ಟಿ. ಸ್ವಾಮಿ ಮೃದಂಗದಲ್ಲಿ ಸಾಥ್ ನೀಡಿದರು.

rangapravesha-2

Leave a Reply

comments

Related Articles

error: