
ಮನರಂಜನೆ
ಫ್ಯಾಷನ್ ಶೋನಲ್ಲಿ ಝೀರೋ ಸೈಝ್ ಮಾಡೆಲ್ ಗಳಿಗಿಲ್ಲ ಅವಕಾಶ..!
ಪ್ಯಾರೀಸ್,ಸೆ.8-ಫ್ಯಾಷನ್ ಲೋಕದಲ್ಲಿ ಮಾಡೆಲ್ ಆಗಿ ಗುರುತಿಸಿಕೊಳ್ಳಬೇಕು, ಹೆಸರು ಮಾಡಬೇಕೆಂದು ಮಾಡೆಲ್ ಗಳು ಡಯೆಟ್ ಮಾಡಿ, ಸಾಕಷ್ಟು ಶ್ರಮವಹಿಸಿ ಝೀರೋ ಸೈಝ್ ಮೇಟೆಂನ್ ಮಾಡಿರುತ್ತಾರೆ. ಆದರೆ ಇದೀಗ ಝೀರೋ ಸೈಝ್ ಮಾಡೆಲ್ ಗಳನ್ನು ಫ್ಯಾಷನ್ ಶೋ ಗೆ ನೇಮಕ ಮಾಡಿಕೊಳ್ಳುವಂತಿಲ್ಲ. ಇದು ಇಡೀ ಫ್ಯಾಷನ್ ಜಗತ್ತಿಗೆ ಶಾಕಿಂಗ್ ಸುದ್ದಿಯಾಗಲಿದೆ.
ಹೌದು, ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಫ್ಯಾಷನ್ ಹೌಸ್ ಗಳು ತಮ್ಮ ಶೋಗಾಗಿ ಸೈಝ್ ಝೀರೋ ಮಾಡೆಲ್ ಗಳನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ರೂಪದರ್ಶಿಗಳು ಅಗತ್ಯಕ್ಕಿಂತ್ಲೂ ಕಡಿಮೆ ತೂಕ ಹೊಂದಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ನೀಡಬೇಕೆಂದು ಫ್ರಾನ್ಸ್ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅನಾರೋಗ್ಯಕರ ದೇಹ ಪ್ರದರ್ಶನ ಮಾಡುವಂತಿಲ್ಲ ಅಂತಾ ಕಟ್ಟುನಿಟ್ಟಾಗಿ ಹೇಳಿದೆ.
ಹೀಗಾಗಿ ಗೂಸಿ, ಸೇಂಟ್ ಲಾರೆಂಟ್, ಲೂಯಿಸ್ ವಿಟ್ಟೊನ್ ನಂತಹ ಪ್ರಸಿದ್ಧ ಕಂಪನಿಗಳು ಕೂಡ ತಮ್ಮ ಜಾಹೀರಾತುಗಳಿಗೆ ಝೀರೋ ಸೈಝ್ ಮಾಡೆಲ್ ಗಳನ್ನು ಬಳಸಿಕೊಳ್ಳುತ್ತಿಲ್ಲ. ಅಮೆರಿಕದ ಒಂದು ಕಂಪನಿ ಮಾತ್ರ ಸೈಝ್ 2 ಮಾಡೆಲ್ ಗಳನ್ನು ನೇಮಕ ಮಾಡಿಕೊಳ್ತಿದೆ. XXS ಸೈಝ್ ಗಿಂತ್ಲೂ ಸಣ್ಣಗಿರುವವರನ್ನು ಅಂಡರ್ ವೇಯ್ಟ್ ಅಂತಾ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ 16 ವರ್ಷದೊಳಗಿನ ರೂಪದರ್ಶಿಗಳ ಬಳಕೆಗೂ ಕಡಿವಾಣ ಹಾಕಲಾಗಿದೆ. ಇದೇ ತಿಂಗಳ 27ರಿಂದ ಪ್ಯಾರಿಸ್ ಫ್ಯಾಷನ್ ವೀಕ್ ಆರಂಭವಾಗ್ತಿದ್ದು, ಸೈಝ್ ಝೀರೋ ಮಾಡೆಲ್ ಗಳನ್ನು ಕಣ್ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗುವುದಿಲ್ಲ. (ವರದಿ-ಎಂ.ಎನ್)