ಮೈಸೂರು

ಬ್ಯಾಂಕ್‍ ಸಾಲ ಸೌಲಭ್ಯದ ಪ್ರಯೋಜನ ಪಡೆಯಿರಿ: ಸುಜಾತ ಶ್ರೀಕಾಂತಯ್ಯ

ವರುಣಾ ಸರಕಾರಿ ಕಾಲೇಜಿನಲ್ಲಿ ಇತ್ತೀಚಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ನಡೆಯಿತು. ಸ್ಟೇಟ್‍ ಬ್ಯಾಂಕ್ ಆಫ್ ಮೈಸೂರು, ಕಾವೇರಿ ‍ಗ್ರಾಮೀಣ ಬ್ಯಾಂಕ್‍ನ ವರುಣಾ ಶಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಆರ್‍ಬಿಐ ಬೆಂಗಳೂರು ಎಜಿಎಂ ಸುಜಾತ ಶ್ರೀಕಾಂತಯ್ಯ ಅವರು ಕಾಲೇಜಿನ ವಿದ್ಯಾರ್ಥಿ ಮತ್ತು ಗ್ರಾಮಸ್ಥರಿಗೆ ಬ್ಯಾಂಕ್‍ನಲ್ಲಿ ಖಾತೆ ತೆರೆಯಲು ಮತ್ತು ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲ ಸೌಲಭ್ಯದ ಪ್ರಯೋಜನ ಪಡೆಯುವಂತೆ ಮಾಹಿತಿ ನೀಡಿದರು. ಮನೆ ಕಟ್ಟಲು ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಇರುವ ಸಾಲದ ಲಾಭವನ್ನು ಪಡೆಯುವಂತೆ ಸೂಚಿಸಿದರು.

ನಬಾರ್ಡ್ ಎಜಿಎಂ ಅರವಮುದನ್ ಮಾತನಾಡಿ, ಸರಕಾರದ ಯೋಜನೆಗಳಲ್ಲಿ ಲಭ್ಯವಿರುವ ಪಶು ಭಾಗ್ಯ, ಕುರಿ ಮತ್ತು ಆಡು ಸಾಕಣೆಗೆ ಸಾಲ, ಸೋಲಾರ್ ಪಂಪ್‍ಸೆಟ್‍ ಖರೀದಿ, ಗೋದಾಮು ನಿರ್ಮಾಣ ಮುಂತಾದವುಗಳಿಗೆ ನೀಡುವ ಸಾಲವನ್ನು ಪಡೆಯುವಂತೆ ಮಾಹಿತಿ ನೀಡಿದರು. ನಕಲಿ ಫೋನ್‍ ಕರೆಗಳಿಗೆ ಬ್ಯಾಂಕ್‍ ಖಾತೆ ಬಗ್ಗೆ ಮಾಹಿತಿ ನೀಡದಿರುವಂತೆ ಸೂಚಿಸಿದರು.

ಎಸ್‍ಬಿಎಂ ಆರ್ಥಿಕ ಸಾಕ್ಷರತಾ ಕೌನ್ಸಿಲರ್ ಕೆ.ವಿ. ರಂಗನಾಥ್, ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾಲ ಕೃಷ್ಣಾ ನಾಯ್ಕ್, ಅಧ್ಯಕ್ಷ ಕಾಂತಮ್ಮ, ವರುಣಾ ಗ್ರಾಪಂ ಪಿಡಿಒ ಬಸವರಾಜ್ ಮತ್ತು ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

 

 

Leave a Reply

comments

Related Articles

error: