ಮೈಸೂರು

ತಂತ್ರಜ್ಞಾನ ಮನುಷ್ಯನ ಮೆದುಳಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ: ಖಿಂಚ 

ಮೈಸೂರು, ಸೆ.೮: ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಯಂತ್ರಗಳು ಮನುಷ್ಯನ ಮೆದುಳಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದು, ತಂತ್ರಜ್ಞಾನ ಕ್ರಾಂತಿಯಾಗುತ್ತಿದೆ ಎಂದು  ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಹೆಚ್.ಪಿ.ಖಿಂಚ ಅಭಿಪ್ರಾಯಪಟ್ಟರು.

ಶುಕ್ರವಾರ ವಿದ್ಯಾವರ್ಧಕ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾವರ್ಧಕ ಸಂಘದಿಂದ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲಗಳು ಉರುಳಿದಂತೆ ತಂತ್ರಜ್ಞಾನವೂ ಅಷ್ಟೇ ವೇಗವಾಗಿ ಬದಲಾಗುತ್ತಿದೆ. ಹಿಂದೆ ಇದ್ದ ಕೇವಲ ಮೆಗಾ ಬೈಟ್, ಗೀಗಾ ಬೈಟ್‌ನಲ್ಲಿ ಸಂಗ್ರಹಿಸಲಾಗುತ್ತಿದ್ದ ವಿಷಯಗಳು ಇಂದು ನೂತನ ಡೇಟಾ ತಂತ್ರಜ್ಞಾನದ ಪ್ರಗತಿಯಿಂದಾಗಿ ಮನುಷ್ಯನ ಮೆದುಳಿಗಿಂತ ಅತೀ ವೇಗವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಬೇಕಾದ ಮಾಹಿತಿಗಳನ್ನು ಎಲ್ಲೆಂದರಲ್ಲಿ ಪಡೆಯಬಹುದಾದಂತಹ ಅವಕಾಶಗಳು ಲಭ್ಯವಾಗಿವೆ ಎಂದು ಹೇಳಿದರು.

ಇಂದು ಗೂಗಲ್‌ನಿಂದ ಎಲ್ಲಿ ಬೇಕಾದರೂ ಯಾವ ಮಾಹಿತೊಯನ್ನಾದರೂ ಪಡೆಯಬಹುದು. ಅಷ್ಟರ ಮಟ್ಟಿಗೆ ತಂತ್ರಜ್ಞಾನದ ಅಭಿವೃದ್ಧಿಯಾಗಿದೆ. ಸಾಮಾಜಿಕ ಜಾಲತಾಣಗಳು ನಮ್ಮನ್ನು ಆವರಿಸಿವೆ. ಆನ್‌ಲೈನ್ ಸಂಸ್ಥೆಗಳು ಉತ್ತಮ ಸೇವೆ ನೀಡುವುದರೊಂದಿಗೆ ಪೈಪೋಟಿಯನ್ನೂ ನೀಡುತ್ತಿವೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಉಪಾಧ್ಯಕ್ಷ ಬಿ.ಶಿವಲಿಂಗಪ್ಪ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಎಸ್.ಎನ್.ಲಕ್ಷ್ಮೀನಾರಾಯಣ, ಭುವನೇಶ್ವರ್‌ನ ಐಐಟಿ ಪ್ರಾಧ್ಯಾಪಕ ಡಾ.ಗಣಪತಿ ಪಾಂಡ, ಮದ್ರಾಸ್ ಐಐಟಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎನ್.ಸೀತಾರಾಮು, ಜಂಟಿ ಸಂಘಟನಾ ಅಧ್ಯಕ್ಷ ಡಾ.ವಿ.ರವಿಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: