ಮೈಸೂರು

ಕನ್ನಡ ಕಾವ್ಯಗಳು ವಿಶ್ವರೂಪದ ಕಾವ್ಯಗಳಾಗಿ ಬೆಳೆದಿವೆ: ಪ್ರೊ.ಜಿ.ಎಸ್. ಕಾಪಸೆ

ಕನ್ನಡ ಕಾವ್ಯಗಳು ವಿಶ್ವರೂಪದ ಕಾವ್ಯಗಳಾಗಿ ಬೆಳೆದಿವೆ ಎಂದು ಧಾರಾವಾಡದ ಹಿರಿಯ ಸಾಹಿತಿ ಪ್ರೊ. ಜಿ.ಎಸ್. ಕಾಪಸೆ ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಿಯಾಗಬಯಸುವವರು ಕಡ್ಡಾಯವಾಗಿ ನಾಡಿನ ಸಾಹಿತಿಗಳ ಕೃತಿಗಳನ್ನು ಓದಬೇಕು. ಪಂಪನಿಂದ ಕುವೆಂಪುವರೆಗಿನ ಎಲ್ಲ ಕವಿಗಳ ಕೃತಿಗಳನ್ನು ಓದಿ ಎಂದು ಸಲಹೆ ನೀಡಿದರು. ಕುವೆಂಪು, ದ.ರಾ.ಬೇಂದ್ರೆಯರಂತಹ ಕವಿಗಳು ಬೇರ್ಯಾವ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಇವರೆಲ್ಲರೂ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕಾವ್ಯದಿಂದ ಆರಂಭವಾಗಿ ಮಹಾ ಕಾವ್ಯದವರೆಗಿನ ಸಾಹಿತ್ಯ ಹೊಸಗನ್ನಡದಲ್ಲಿ ರಚನೆಯಾಗಿದೆ. ಸಾಹಿತಿಗಳು ಹಿಂದಿನ ಸಾಂಸ್ಕೃತಿಕ ಪ್ರಜ್ಞೆಯೊಂದಿಗೆ ಸಾಹಿತ್ಯ ಸೃಷ್ಟಿಸಬೇಕು ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರ ಕುಮಾರ್, ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ, ಕಾವ್ಯ ಕಮ್ಮಟ ಪ್ರಧಾನ ಸಂಚಾಲಕ ಪ್ರೊ. ಅರವಿಂದ ಮಾಲಗತ್ತಿ, ಸಂಚಾಲಕಿ ಡಾ.ಎನ್.ಕೆ. ಲೋಲಾಕ್ಷಿ ಇದ್ದರು.

 

Leave a Reply

comments

Related Articles

error: