
ಕರ್ನಾಟಕ
ಕೊಳ್ಳೇಗಾಲ ರಸ್ತೆ ಕಾಮಗಾರಿ : ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಡಿಸಿ ಆದೇಶ
ರಾಜ್ಯ(ಚಾಮರಾಜನಗರ) ಸೆ. 8: – ಕೊಳ್ಳೇಗಾಲ ನಗರ ಪರಿಮಿತಿಯಲ್ಲಿ ಕಿ.ಮೀ. 336.260 ರಿಂದ ಕಿ.ಮೀ. 344.600ರವರೆಗೆ ಅಂದರೆ ಅಚ್ಗಾಳ್ ವೃತ್ತದಿಂದ ಐಬಿ ವೃತ್ತದವರೆಗೆ ರಸ್ತೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬದಲಿ ಮಾರ್ಗದಲ್ಲಿ ವಾಹನ ಸಂಚರಿಸಲು ಆದೇಶಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ಎಡಿವಿ ವೃತ್ತದಿಂದ ಬೆಂಗಳೂರು ಸರ್ಕಲ್ನ ಪಟ್ಟಣ ಠಾಣೆ ಮುಂಭಾಗದಿಂದ ತೆರಳಿ ಮಸೀದಿ ವೃತ್ತಕ್ಕೆ ಪ್ರವೇಶಿಸಿ ಡಾ. ರಾಜ್ ಕುಮಾರ್ ರಸ್ತೆ ಹಾಗೂ ಜಯ ಇನ್ಸ್ಟ್ಯೂಟ್ ರಸ್ತೆಯ ಮೂಲಕ ಪ್ರಶಾಂತಿ ಲಾಡ್ಜ್ ಹತ್ತಿರ ಎಡಕ್ಕೆ ತಿರುಗಿ ಬಸ್ ನಿಲ್ದಾಣವನ್ನು ಪ್ರವೇಶಿಸಬೇಕು.
ಹೊರ ಹೋಗುವ ವಾಹನಗಳು ಗಣಪತಿ ದೇವಸ್ಥಾನದಿಂದ ಎಬಿಎಂ ರಸ್ತೆಯ ಮೂಲಕ ಡಾ. ರಾಜ್ ಕುಮಾರ್ ರಸ್ತೆಯ ಮುಖಾಂತರ ಮಸೀದಿ ವೃತ್ತಕ್ಕೆ ಬಂದು ಕನ್ನಿಕಾಪರಮೇಶ್ವರಿ ವೃತ್ತದಲ್ಲಿ ಬಲಕ್ಕೆ ತಿರುಗಿ ಎಸ್ಡಿಎ ಶಾಲೆಯ ರಸ್ತೆಯ ಮುಂಭಾಗದಿಂದ ಬೆಂಗಳೂರು ರಸ್ತೆ ತಲುಪಬೇಕು.
ಭಾರಿ, ಲಘು ಹಾಗೂ ಎಲ್ಲಾ ರೀತಿಯ ವಾಹನಗಳು ರಸ್ತೆ ಕಾಮಗಾರಿ ಮುಗಿಯುವವರೆಗೆ ಸೂಚಿತ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)