ಸುದ್ದಿ ಸಂಕ್ಷಿಪ್ತ

ಕೈಮಗ್ಗ ನೇಕಾರರಿಗೆ ಕಿಟ್ ವಿತರಣೆ : ಅರ್ಜಿ ಸಲ್ಲಿಕೆಗೆ ಅವಕಾಶ

ಚಾಮರಾಜನಗರ, ಸೆ.8: – ಕೈಮಗ್ಗ ಮತ್ತು ಜವಳಿ ಇಲಾಖೆಯು ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಕೈಮಗ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಮಗ್ಗ ನೇಕಾರರಿಗೆ ಕೈಮಗ್ಗ ವಿನ್ಯಾಸಗಳ ಉನ್ನತೀಕರಣಕ್ಕಾಗಿ ವಿವಿಧ ಜಕಾರ್ಡ್ ಕಿಟ್‍ಗಳನ್ನು ಒದಗಿಸಲಿದೆ.

ಶೇ. 50ರ ಸಹಾಯಧನದಲ್ಲಿ ಸಾಮಾನ್ಯ ವರ್ಗದವರಿಗೆ ಹಾಗೂ ಶೇ. 90ರ ಸಹಾಯಧನದಲ್ಲಿ ಪಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಎಲೆಕ್ಟ್ರಾನಿಕ್ ಜಕಾರ್ಡ್, ನ್ಯೂಮ್ಯಾಟಿಕ್ ಜಕಾರ್ಡ್ ಹಾಗೂ ಮೋಟರೈಸ್ಡ್ ಜಕಾರ್ಡ್ ಕಿಟ್‍ಗಳನ್ನು ಒದಗಿಸಲಾಗುವುದು.

ಹಾಲಿ ಕೈಮಗ್ಗ ವೃತ್ತಿಯಲ್ಲಿರುವ ನೇಕಾರರು ಕೈಮಗ್ಗ ವೃತ್ತಿಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಒದಗಿಸಿ ಅರ್ಜಿಗಳನ್ನು ಕಚೇರಿಯಿಂದ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿ (ದೂ.ಸಂ. 08226-222883)ಯನ್ನು ಸಂಪರ್ಕಿಸುವಂತೆ ತಿಳಿಸಿದೆ.(ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: