ದೇಶಪ್ರಮುಖ ಸುದ್ದಿವಿದೇಶ

ರಷ್ಯಾದಿಂದ ವಿಶ್ವದಲ್ಲೇ ಪ್ರಬಲ ಕ್ಷಿಪಣಿ ಅಭಿವೃದ್ಧಿ: ಏಕಕಾಲಕ್ಕೆ ಹತ್ತು ಅಣುಬಾಂಬ್ ಸ್ಫೋಟಿಸಬಲ್ಲ ‘ಸತಾನ್-2’

ರಷ್ಯಾ ದೇಶವು ಗುಪ್ತವಾಗಿ ಅಭಿವೃದ್ಧಿಪಡಿಸಿರುವ ‘ಸತಾನ್-2’ ಕ್ಷಿಪಣಿಯ ಸಾಮರ್ಥ್ಯ ಕೇಳಿ ಅಮೆರಿಕ ಹೌಹಾರಿದ್ದರೆ, ಯುರೋಪಿಯನ್ ರಾಷ್ಟ್ರಗಳು ಬೆಚ್ಚಿಬಿದ್ದಿವೆ. ಏಕೆಂದರೆ ಅಮೆರಿಕ ಮತ್ತು ರಷ್ಯಾ ನಡುವೆ ಈ ಹಿಂದೆ ಏರ್ಪಟ್ಟಿದ್ದ ಕ್ಷಿಪಣಿ ಅಭಿವೃದ್ಧಿ ಮತ್ತು ಪೈಪೋಟಿ ತಡೆ ಒಪ್ಪಂದವನ್ನು ಮುರಿದು ರಷ್ಯಾ ಈ ಮಹಾ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.

ಇಷ್ಟು ಮಾತ್ರವಲ್ಲ, ರಷ್ಯಾದ ಈ ಹೊಸ ಅಸ್ತ್ರವು ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಫ್ರಾನ್ಸ್ ದೇಶದಷ್ಟು ದೊಡ್ಡ ವಿಸ್ತೀರ್ಣದ ಭೂ ಪ್ರದೇಶವನ್ನೇ ಮರುಭೂಮಿಯಾಗಿಸಬಲ್ಲ ಸಾಮರ್ಥ್ಯ ಹೊಂದಿದೆ!

ಅಮೆರಿಕ, ಚೀನಾ, ಭಾರತ ಸೇರಿದಂತೆ ಬೇರೆ ಯಾವುದೇ ದೇಶ ಇಂತಹ ಅಸ್ತ್ರ ತಯಾರಿಸಿಲ್ಲ. ಪ್ರತಿ ಸೆಕೆಂಡ್‍ಗೆ 7 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಗೆ 10 ಸಾವಿರ ಕಿ.ಮೀ. ದೂರದ ಗುರಿಯನ್ನು ನಾಮಾವಶೇಷ ಮಾಡುವ ಸಾಮರ್ಥ್ಯವಿದೆ ಎಂದು ರಷ್ಯಾನ್ ಸೇನೆಯ ಮೂಲಗಳು ತಿಳಿಸಿವೆ.

ರಾಡಾರ್‍ನಿಂದಲೂ ಗುರುತಿಸಲು ಸಾಧ್ಯವಿಲ್ಲ…!

ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿ ತಯಾರಿಸಲಾಗಿರುವ ಈ ಕ್ಷಿಪಣಿಯು ಯಾವುದೇ ದೇಶದ ರಾಡಾರ್‍ಗೆ ಕಣ್ಣಿಗೆ ಕಾಣಿಸುವುದಿಲ್ಲ. ಎದೆನಡುಗಿಸುವ ವೇಗದಲ್ಲಿ ನುಗ್ಗಿಬರುವ ಶತ್ರುದೇಶದ ಕ್ಷಿಪಣಿಗಳಿಗೆ ಛೇದಕಕ್ಷಿಪಣಿ ಉಡಾಯಿಸಿ ರಕ್ಷಣೆ ಪಡೆಯಬೇಕಾದರೆ ಶತ್ರುದೇಶದ ಕ್ಷಿಪಣಿಯನ್ನು ರಾಡಾರ್‍ ಮೂಲಕ ಗುರುಸಿಲಾಗುತ್ತದೆ. ಆದರೆ ರಷ್ಯಾದ ಈ ನೂತನ ‘ಸತಾನ್-2’ ಕ್ಷಿಪಣಿಯು ಯಾವುದೇ ರಾಡಾರ್‍ ಕಣ್ಣಿಗೆ ನಿಲುಕುವುದಿಲ್ಲ. ಅಷ್ಟು ವೇಗವಾಗಿ ಸಾಗುವಂತೆ ರಹಸ್ಯ ತಂತ್ರಜ್ಞಾನದಿಂದ ಈ ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ.

ಎರಡನೇ ಮಹಾಯುದ್ಧದಲ್ಲಿ ಜಪಾನ್‍ ದೇಶದ ಹಿರೊಷಿಮ ಹಾಗೂ ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣುಬಾಂಬ್ ಪ್ರಯೋಗಿಸಿತ್ತು. ಈ ಅಣುಬಾಂಬ್ ದಾಳಿಯಿಂದಾಗಿ ಈ ಎರಡೂ ನಗರಗಳು ಛಿದ್ರಗೊಂಡಿದ್ದವು. ಈಗ ರಷ್ಯಾ ಅಭಿವೃದ್ಧಿಪಡಿಸಿರುವ ಸತಾನ್-2 ಕ್ಷಿಪಣಿಯು ಇವಕ್ಕಿಂತ 2 ಸಾವಿರ ಪಟ್ಟು ಅಧಿಕ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಕ್ಷಿಪಣಿ ಉಡಾಯಿಸಿದರೆ ಅಮೆರಿಕದ ಎರಡನೇ ದೊಡ್ಡ ರಾಜ್ಯವಾಗಿರುವ ಟೆಕ್ಸಾಸ್ ರಾಜ್ಯ ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ಮಿಲಿಟರಿ ತಜ್ಞರು ಅಂದಾಜಿಸಿದ್ದಾರೆ.

ಇಂತಹ ಕ್ಷಿಪಣಿಯನ್ನು ರಷ್ಯಾ ಬಹಳ ಹಿಂದೆಯೇ ಅಭಿವೃದ್ಧಿ ಪಡಿಸಿತ್ತು. ಇದೇ ಸರಣಿಯ ಮೊದಲ ಕ್ಷಿಪಣಿ ತಯಾರಾದದ್ದು 1970ರಲ್ಲಿ ಎಂದರೆ ನಂಬಲು ಸಾಧ್ಯವಿಲ್ಲ. ಅಮೆರಿಕ ಮತ್ತು ರಷ್ಯಾ ಒಡಂಬಡಿಕೆಯಿಂದ ಕ್ಷಿಪಣಿ ಅಭಿವೃದ್ಧಿಗೆ ರಷ್ಯಾ ಕಡಿವಾಣ ಹಾಕಿತ್ತು. ಆದರೆ ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಚಟುವಟಿಕೆಗಳು ಹೆಚ್ಚಾದ ಕಾರಣ ಈ ಒಪ್ಪಂದ ಮುರಿದ ರಷ್ಯಾ, ಅತ್ಯಂತ ಪ್ರಬಲ ಕ್ಷಿಪಣಿ ಅನಾವರಣಗೊಳಿಸುವ ಮೂಲಕ ಅಮೆರಿಕವನ್ನು ದಂಗುಬಡಿಸಿದೆ. ಅಮೆರಿಕ, ಚೀನಾ, ಪಾಕಿಸ್ತಾನ, ಭಾರತ, ಉತ್ತರ ಕೊರಿಯಾ ರಾಷ್ಟ್ರಗಳು  ನೆರೆ-ಹೊರೆಯ ಶಸ್ತ್ರಾಸ್ತ್ರ ಪೋಪೋಟಿಯಿಂದಾಗಿ ಪರಮಾಣು ಬಾಂಬ್ ಹೊತ್ತೊಯ್ಯಬಲ್ಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಇಟ್ಟುಕೊಂಡಿವೆ. ಇವೆಲ್ಲ ಹೆಚ್ಚಂದರೆ ಒಂದು ನಗರವನ್ನು ಗುರಿಮಾಡಿ ದಾಳಿ ಮಾಡಬಹುದಾದಂತಹವು. ಆದರೆ, ಸತಾನ್-2 ಕ್ಷಿಪಣಿಯು ಇಡೀ ಒಂದು ದೇಶವನ್ನೇ ನಾಮಾವಶೇಷ ಮಾಡಬಹುದಾದಷ್ಟು ಸಾಮರ್ಥ್ಯ ಹೊಂದಿದ್ದು, ಇವೆಲ್ಲಕ್ಕಿಂತ ವಿನಾಶಕಾರಿಯಾಗಿ ಪರಿಣಮಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.

satan-2-new-web

Leave a Reply

comments

Related Articles

error: